DAKSHINA KANNADA
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 11 ಕೊರೊನಾ ಪಾಸಿಟೀವ್
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 11 ಕೊರೊನಾ ಪಾಸಿಟೀವ್
ಮಂಗಳೂರು, ಮೇ 27: ದಕ್ಷಿಣಕನ್ನಡದಲ್ಲಿ ಇಂದು ಬರೋಬ್ಬರಿ 11 ಕೊರೊನಾ ಪಾಸಿಟೀವ್ ಪ್ರಕರಣ ಪತ್ತೆಯಾಗಿದೆ.
ಇವುಗಳಲ್ಲಿ 10 ಪ್ರಕರಣ ಮಹಾರಾಷ್ಟ್ರದಿಂದ ಬಂದವರದ್ದಾಗಿದ್ದರೆ, ಒಂದು ಗುಜರಾತ್ ನಿಂದ ಬಂದ ವ್ಯಕ್ತಿಯಲ್ಲಿ ಪತ್ತೆಯಾಗಿದೆ.
11 ಪ್ರಕರಣದಲ್ಲಿ ಮೂರು ವರ್ಷದ ಮಗು, 11 ಮತ್ತು 17 ವರ್ಷದ ಬಾಲಕಿಯರಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾಗಿದೆ.
ಒಟ್ಟು 7 ಹೆಣ್ಣು ಮಕ್ಕಳು, ನಾಲ್ವರು ಪುರುಷರಿಗೆ ಸೋಂಕು ಖಚಿತಗೊಂಡಿದ್ದು, ಮಹಾರಾಷ್ಟ್ರದಿಂದ ಹಾಗೂ ಗುಜರಾತ್ ನಿಂದ ಬಂದು ಈ ಹಿಂದೆಯೇ ಜಿಲ್ಲೆಯ ವಿವಿಧೆಡೆಗಳಲ್ಲಿ ಕ್ವಾರೆಂಟೈನ್ ನಲ್ಲಿದ್ದರು.
ಇದೀಗ ಪಾಸಿಟೀವ್ ಪತ್ತೆಯಾದವರನ್ನು ಮಂಗಳೂರಿನ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.
You must be logged in to post a comment Login