Connect with us

    FILM

    ಜೈಲಿನಿಂದ ಹೊರಬಂದ ಬೆನ್ನಲ್ಲೇ ಕ್ಯಾಮೆರಾಗೆ ಪೋಸ್​​ ಕೊಟ್ಟ ಸೋನು ಗೌಡ ಫೊಟೋ ವೈರಲ್..!

    ಬೆಂಗಳೂರು: ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ರೀಲ್ಸ್ ಸ್ಟಾರ್, ಬಿಗ್‌ಬಾಸ್‌ ಸ್ಪರ್ಧಿ ಸೋನು ಗೌಡ ಅವರು ಜೈಲುವಾಸ ಅನುಭವಿಸಿ  ಇದೀಗ  ಬಿಡುಗಡೆಯಾಗಿ ಹೊರ ಬಂದು ಫೊಟೊ ಸೂಟ್ ಮಾಡಿಕೊಂಡಿದ್ದಾಳೆ.

     

    ಪರಪ್ಪನ ಅಗ್ರಹಾರದ ಕಾರಾಗೃಹದಿಂದ ಜಾಮೀನಿನ ಮೇಲೆ ಹೊಬಂದ ಸೋನು ಗೌಡ ಹೊಸ ಫೋಟೋಶೂಟ್​ ಮಾಡಿಕೊಂಡಿದ್ದಾರೆ. ಯುಗಾದಿ ಹಬ್ಬದ ನಿಮಿತ್ತ ಸೋನು ಗೌಡ ಅಮ್ಮನ ಚೆಂದದ ಸೀರೆಯನ್ನು ತೊಟ್ಟುಕೊಂಡು ಕ್ಯಾಮೆರಾಗೆ ಸಕತ್ ಪೋಸ್​ ಕೊಟ್ಟಿದ್ದಾರೆ.ಕೆಣಕುತಿದೆ….ನಿನ್ನ ಕಣ್ಣೋಟ ಅನ್ನೋ ಹಾಡಿಗೆ ಸೋನು ರೀಲ್ಸ್ ಕೂಡ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ಕೆಲವರು ಪಾಸಿಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ಒಳ್ಳೆಯ ಟೈಮ್ ಬರುತ್ತೆ ಸ್ವಲ್ಪ ಸಮಾಧಾನವಾಗಿ ಇರೀ. ಕನ್ನಡತಿ ಅಂತಾ ಕಾಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ನೀವು ಇಲ್ಲದೆ ಇರೋದಕ್ಕೆ ಇನ್​ಸ್ಟಾಗ್ರಾಮ್​ ನೋಡುವುದಕ್ಕೆ ಬೇಸರ ಆಗುತ್ತಿತ್ತು ಅಂತಾ ಕಾಮೆಂಟ್ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply