Connect with us

LATEST NEWS

ಶಾಸಕಿ ಶಕುಂತಲಾ ಶೆಟ್ಟಿ Photo ವೈರಲ್

ಪುತ್ತೂರು ಸೆಪ್ಟೆಂಬರ್ 4: ಬಿಜೆಪಿ ಯುವಮೋರ್ಚಾ ಸೆಪ್ಟೆಂಬರ್ 7 ರಂದು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಮಂಗಳೂರು ಚಲೋ ಬೈಕ್ Rally ಯ ಪೂರ್ವಭಾವಿಯಾಗಿ ಪ್ರತಿ ಪಂಚಾಯತ್ ಮಟ್ಟದಲ್ಲೂ ಪ್ರತಿಭಟನೆ ನಡೆಯುತ್ತಿದೆ. ಅಲ್ಲದೆ Rally ಯ ಮೂಲ ಉದ್ದೇಶವಾದ ಪಿಎಫ್ಐ ಹಾಗೂ ಅದರ ಅಂಗಸಂಸ್ಥೆಗಳನ್ನು ನಿಶೇಧಿಸಬೇಕೆಂದು ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗುತ್ತಿದೆ.

ಅದೇ ಪ್ರಕಾರ ಪುತ್ತೂರು ನಗರ ಯುವ ಮೋರ್ಚಾದಿಂದಲೂ ಪುತ್ತೂರು ಸಹಾಯಕ ಕಮಿಷನರ್ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು. ಆದರೆ ಇಲ್ಲಿನ ಮನವಿ ಸಲ್ಲಿಸಿದರ ವಿಚಾರ ಹೆಚ್ಚು ಚರ್ಚೆಯಾಗದೆ ಮನವಿ ನೀಡುವ ಸಂದರ್ಭದಲ್ಲಿ ತೆಗೆದ ಚಿತ್ರವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಶಾಸಕಿ ಶಕುಂತಲಾ ಶೆಟ್ಟಿ ಚಿತ್ರ ವೈರಲ್

ಈ ಚಿತ್ರದಲ್ಲಿ ಯುವಮೋರ್ಚಾ ಕಾರ್ಯಕರ್ತರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸುತ್ತಿದ್ದ ಸಮಯದಲ್ಲಿ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿಯೂ ಉಪಸ್ಥಿತರಿದ್ದರು. ಫೋಟೋ ತೆಗೆದ ವ್ಯಕ್ತಿ ಯುವಮೋರ್ಚಾದ ಪದಾಧಿಕಾರಿಗಳ ಜೊತೆಗೆ ಶಾಸಕಿಯನ್ನೂ ಸೇರಿಸಿ ಪೋಟೋ ತೆಗೆದಿದ್ದು ಶಾಸಕಿಯೂ ಈ ತಂಡದಲ್ಲಿ ಇದ್ದರೇ ಎನ್ನುವ ಅನುಮಾನವನ್ನು ಹುಟ್ಟುವಂತೆ ಮಾಡಿದೆ .

ಈ ಚಿತ್ರವೀಗ ಕಾಂಗ್ರೇಸ್, ಬಿಜೆಪಿ,ಪಿಎಫ್ಐ ಹೀಗೆ ಎಲ್ಲಾ ವಾಟ್ಸ್ಅಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದ್ದು, ಕೆಲವರು ಇದಕ್ಕೆ ರಾಜಕೀಯ ಬಣ್ಣವನ್ನೂ ಹಚ್ಷುತ್ತಿದ್ದಾರೆ. ಈ ಚಿತ್ರವೀಗ ಶಾಸಕಿ ಶಕುಂತಲಾ ಶೆಟ್ಟಿಯವರ ಕಾಂಗ್ರೇಸ್ ನಲ್ಲೇ ಇರುವ ವಿರೋಧಿ ಬಣಕ್ಕೆ ಬಾಯಿಗೆ ಐಸ್ ಕ್ರೀಮ್ ಇಟ್ಟಂತಾಗಿದ್ದು, ಚಿತ್ರವನ್ನು ಇದ್ದ ಬದ್ದವರಿಗೆಲ್ಲಾ ಶೇರ್ ಮಾಡಲಾಗುತ್ತಿದೆ.ಚಿತ್ರವೀಗ ಶಾಸಕಿಯವರಿಗೆ ಪ್ರಚಾರದ ಜೊತೆಗೆ ತಲೆನೋವನ್ನೂ ತಂದಿದೆ. ವಾಸ್ತವವಾಗಿ ಶಾಸಕಿ ತನ್ನ ಕೆಲಸದ ನಿಮಿತ್ತ ಸಹಾಯಕ ಆಯುಕ್ತರ ಕಛೇರಿಯಲ್ಲಿ ಇದ್ದ ಸಂದರ್ಭ ಅದಾಗಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *