Connect with us

LATEST NEWS

ಮಾಲ್ ಡ್ಯಾನ್ಸ್ ಬಳಿಕ ಇದೀಗ ಮೊಬೈಲ್ ನಲ್ಲೂ ವಿದ್ಯಾರ್ಥಿಗಳನ್ನು ದೋಚುತ್ತಿರುವ ಆಲೋಶಿಯಸ್ ಕಾಲೇಜು

ಮಾಲ್ ಡ್ಯಾನ್ಸ್ ಬಳಿಕ ಇದೀಗ ಮೊಬೈಲ್ ನಲ್ಲೂ ವಿದ್ಯಾರ್ಥಿಗಳನ್ನು ದೋಚುತ್ತಿರುವ ಆಲೋಶಿಯಸ್ ಕಾಲೇಜು

ಮಂಗಳೂರು, ಮಾರ್ಚ್ 17: ವಿದ್ಯಾರ್ಥಿಗಳನ್ನು ಮಾಲ್ ಗಳಲ್ಲಿ ಕುಣಿಸಿ ಚಂದಾ ಎತ್ತುತ್ತಿದ್ದ ಮಂಗಳೂರಿನ ಪ್ರಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಂತ ಅಲೋಶಿಯಸ್ ಕಾಲೇಜು ಇದೀಗ ವಿದ್ಯಾರ್ಥಿಗಳ ಮೊಬೈಲ್ ಗಳಿಂದಲೂ ಹಣ ದೋಚಲು ಆರಂಭಿಸಿದೆ.

ಕಾಲೇಜು ಆವರಣಕ್ಕೆ ಮೊಬೈಲು ತರುವುದನ್ನು ನಿಷೇಧಿಸಿರುವ ಸಂತ ಅಲೋಶಿಯಸಿನ ಪಿಯುಸಿ ಕಾಲೇಜು ಆಡಳಿತ ಮಂಡಳಿ ನಿಯಮ ಮೀರಿ ಮೊಬೈಲ್ ತಂದ ವಿದ್ಯಾರ್ಥಗಳಿಗೆ ದಂಡ ವಿಧಿಸುವ ಪ್ರಕ್ರಿಯೆಗೆ ಮುಂದಾಗುವ ಮೂಲಕ ಸುದ್ಧಿಯಲ್ಲಿದೆ.

ವಿದ್ಯಾರ್ಥಿಗಳು ಕಾಲೇಜಿಗೆ ತಂದ ಮೊಬೈಲ್ ಗಳನ್ನು ಇಡಲು ಕಾಲೇಜಿನಲ್ಲಿ ಪ್ರತ್ಯೇಕ ರೂಂ ನ ವ್ಯವಸ್ಥೆಯನ್ನೂ ಮಾಡಲಾಗಿದೆ.

ಈ ರೂಂ ನಲ್ಲೂ ಮೊಬೈಲ್ ಗಳನ್ನು ಇಡದೆ ತರಗತಿಗೆ ಕೊಂಡೊಯ್ಯುವ ವಿದ್ಯಾರ್ಥಿಗಳ ಬಗ್ಗೆ ಸುಳಿವು ದೊರೆತ ಕಾಲೇಜಿನ ಆಡಳಿತ ಮಂಡಳಿ ಕಾಲೇಜಿನಾದ್ಯಂತ ಅಪರೇಶನ್ ಮೊಬೈಲ್ ಹಂಟ್ ಆರಂಭಿಸಿದೆ.

ಈ ಅಪರೇಶನ್ ಹಂಟ್ ನಲ್ಲಿ ಸುಮಾರು 700 ಕ್ಕೂ  ಮಿಕ್ಕಿ ಮೊಬೈಲ್ ಗಳನ್ನು ವಶಪಡಿಸಿಕೊಂಡಿದೆ.

ಮೊಬೈಲ್ ವಶಪಡಿಸಿ ವಿದ್ಯಾರ್ಥಿಗಳು ಮನೆಗೆ ಹಿಂದಿರುಗುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಬದಲು ಪ್ರತಿ ಮೊಬೈಲ್ ಮೇಲೆ ಸಾವಿರ ರೂಪಾಯಿಗಳ ದಂಡವನ್ನೂ ಪಡೆದಿದೆ.ಸಾಮಾನ್ಯ ಅಂಡ್ರಾಯಿಡ್ ಫೋನ್ ಗಳಿಗೆ ಸಾವಿರ ಆದರೆ ದುಬಾರಿ ಐ ಫೋನ್ ಗಳಿಗೆ ಬರೋಬ್ಬರಿ 2 ಸಾವಿರ ದಂಡ ವಿಧಿಸಲಾಗುತ್ತಿದೆ.

ಕಾಲೇಜು ಆಡಳಿತ ಮಂಡಳಿಯ ಈ ರೀತಿಯ ಹಗಲು ದರೋಡೆಗೆ ವಿದ್ಯಾರ್ಥಿ ಸಮೂಹದಿಂದ ಭಾರೀ ವಿರೋಧಗಳೂ ವ್ಯಕ್ತವಾಗುತ್ತಿದೆ.

ಪ್ರತಿ ಮೊಬೈಲ್ ಗೆ ‍ಒಂದು ಸಾವಿರ ರೂಪಾಯಿಯಂತೆ ಈಗಾಗಲೇ ವಶಪಡಿಸಿಕೊಂಡಿರುವ 700 ಮಿಕ್ಕಿದ ಮೊಬೈಲ್ ಗಳ ಮೇಲಿನ ದಂಡ ಕೆಲವು ಲಕ್ಷ ರೂಪಾಯಿಗಳಾಗಿದೆ.

ಇಷ್ಟೊಂದು ಹಣವನ್ನು ವಿದ್ಯಾರ್ಥಿಗಳಿಂದ ದರೋಡೆ ಮಾಡುತ್ತಿರುವ ಕಾಲೇಜಿನ ಆಡಳಿತ ಮಂಡಳಿ ಲೂಟಿ ಹೊಡೆದ ಹಣವನ್ನು ಯಾವ ಚಾರಿಟಿಗೆ ನೀಡುತ್ತದೆ ಎನ್ನುವುದನ್ನು ನೋಡಬೇಕಿದೆ.

ಚಾರಿಟಿ ಹೆಸರಿನಲ್ಲಿ ನಿರಂತರವಾಗಿ ಮಾಲ್ ಗಳಲ್ಲಿ ವಿದ್ಯಾರ್ಥಿಗಳನ್ನು ಕುಣಿಸುತ್ತಿರುವ ಈ ಕಾಲೇಜು ಆಡಳಿತ ಮಂಡಳಿ ಇನ್ನು ಯಾವ ಯಾವ ರೀತಿಯಲ್ಲಿ ಹಣ ಲಪಟಾಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *