Connect with us

LATEST NEWS

ಜಗದೀಶ್ ಕಾರಂತ್ ಮೇಲೆ ಪಿಎಫ್ಐ ನಿಂದ ದೂರು

ಜಗದೀಶ್ ಕಾರಂತ್ ಮೇಲೆ ಪಿಎಫ್ಐ ನಿಂದ ದೂರು

ಪುತ್ತೂರು ಸೆಪ್ಟೆಂಬರ್ 21: ಸಂಪ್ಯ ಪೋಲೀಸ್ ಠಾಣೆಯ ಎಸ್.ಐ. ಅಬ್ದುಲ್ ಖಾದರ್ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಮೇಲೆ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪುತ್ತೂರು ನಗರ ಕಾರ್ಯದರ್ಶಿ ಅಜೀಜ್ ಕಬಕ ಪೋಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ಜಗದೀಶ್ ಕಾರಂತ ಎಸ್.ಐ ಖಾದರ್ ಅವರನ್ನು ಬಟ್ಟೆ ಬಿಚ್ಚಿ ಕತ್ತೆಯ ಮೇಲೆ ಮೆರವಣಿಗೆ ಯಾಕೆ ಮಾಡಬಾರದು ಎಂದು ಪ್ರಚೋದನಕಾರಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸೆಪ್ಟಂಬರ್ 15 ರಂದು ಸಂಪ್ಯ ಎಸ್.ಐ ಹಾಗೂ ಅದೇ ಠಾಣೆಯ ಸಿಬ್ಬಂದಿಗಳಾದ ಚಂದ್ರ ಹಾಗೂ ಎ.ಎಸ್.ಐ ರುಕ್ಮ ನಾಯ್ಕ ವಿರುದ್ಧ ಹಿಂದೂ ಜಾಗರಣ ವೇದಿಕೆ ಪುತ್ತೂರಿನಲ್ಲಿ ಪ್ರತಿಭಟನೆಯನ್ನು ನಡೆಸಿತ್ತು. ಎಸ್.ಐ ಹಾಗೂ ಸಿಬ್ಬಂದಿಗಳು ಸಂಪ್ಯ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಅಕ್ರಮ ಗೋಸಾಟ ಹಾಗೂ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿದ್ದು, ಇದಕ್ಕೆ ಎಸ್.ಐ ಹಾಗೂ ಸಿಬ್ಬಂದಿಗಳು ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿ ಹಿಂಜಾವೇ ಪ್ರತಿಭಟನೆಯನ್ನು ನಡೆಸಿತ್ತು.

ಈ ನಡುವೆ ನಿನ್ನೆ ದಕ್ಷಿಣಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಗೃಹಸಚಿವ ರಾಮಲಿಂಗ ರೆಡ್ಡಿಯವರೂ ಕಾರಂತರ ವಿರುದ್ಧ ಪ್ರಕರಣ ದಾಖಲಿಸದ ಪೋಲೀಸರ ವಿರುದ್ಧ ಗರಂ ಆಗಿದ್ದರು. ಗೃಹಸಚಿವರು ಜಿಲ್ಲೆಯಿಂದ ಬೆಂಗಳೂರು ಹೊರಟ ತಕ್ಷಣವೇ ಪಿಎಫ್ಐ ಸಂಘಟನೆ ಜಗದೀಶ್ ಕಾರಂತ್ ವಿರುದ್ಧ ದೂರು ದಾಖಲಿಸಿದೆ.

 

Facebook Comments

comments