KARNATAKA
ಗಗನಮುಖಿಯಾದ ಪೆಟ್ರೋಲ್ ಡೀಸೆಲ್ ಬೆಲೆ..ದಿನದಿಂದ ದಿನಕ್ಕೆ ಪೈಸೆ ಲೆಕ್ಕದಲ್ಲಿ ಏರಿಕೆ

ಬೆಂಗಳೂರು ನವೆಂಬರ್ 28: ಕೊರೊನಾದ ಆರ್ಥಿಕ ಹೊಡೆತದ ನಡುವೆ ಜನಸಾಮಾನ್ಯರಿಗೆ ಮತ್ತೊಂದು ಬಿಸಿ ತಟ್ಟಿದ್ದು, ಕಳೆದ ಒಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೆ ಇದ್ದು, ಪೆಟ್ರೋಲ್ ಗೆ ಅಚ್ಚೇದಿನ ಬಂದ ಹಾಗೆ ಕಾಣುತ್ತಿದೆ….!!
ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ದರಗಳು ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಲೇ ಇವೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ನವೆಂಬರ್ 20 ರಿಂದ 28ರವರೆಗಿನ 9 ದಿನಗಳ ಅವಧಿಯಲ್ಲಿ 8 ದಿನಗಳು ಇಂಧನ ದರವನ್ನು ಹೆಚ್ಚಿಸಿವೆ.

ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹ 1.11ರಷ್ಟು ಹಾಗೂ ಪ್ರತಿ ಲೀಟರ್ ಡೀಸೆಲ್ ದರ ₹1.77ರಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಶನಿವಾರ ಪ್ರತಿ ಲೀಟರ್ ಪೆಟ್ರೋಲ್ ದರ 24 ಪೈಸೆ ಹೆಚ್ಚಾಗಿದ್ದು ₹ 84.87ರಂತೆ ಮಾರಾಟವಾಗಿದೆ.
ಡೀಸೆಲ್ ದರ 28 ಪೈಸೆ ಹೆಚ್ಚಾಗಿ ₹ 76.46ರಂತೆ ಮಾರಾಟವಾಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 88.58ರಿಂದ ₹ 88.81ಕ್ಕೆ ಹಾಗೂ ಡೀಸೆಲ್ ದರ ₹ 78.38 ರಿಂದ ₹ 78.66ಕ್ಕೆ ಏರಿಕೆಯಾಗಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸವಾಗಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಆಗುತ್ತಿದೆ. ಇದಕ್ಕೆ ಅನುಗುಣವಾಗಿ ದೇಶದಲ್ಲಿ ಕಂಪನಿಗಳು ಇಂಧನ ದರ ಹೆಚ್ಚಿಸುತ್ತಿವೆ.