Connect with us

LATEST NEWS

ಮಂಗಳೂರು ಪೊಲೀಸರ ಕಾರ್ಯಾಚರಣೆ – 24 ಕೆಜಿ ಗಾಂಜಾ ಸಾಗಾಟಕ್ಕೆ ಯತ್ನಿಸಿದ ಇಬ್ಬರ ಬಂಧನ

ಮಂಗಳೂರು : ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಗಾಂಜಾ ಸಾಗಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ಸುಮಾರು 24 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಕೇರಳದ ಕಾಸರಗೋಡು ನಿವಾಸಿಗಳಾದ ಇಬ್ರಾಹಿಂ ಮಡನ್ನೂರು ಹಾಗೂ ಅಬ್ದುಲ್‌ ನಿಜಾದ್‌ ಎಂದು ಗುರುತಿಸಲಾಗಿದೆ.


ಆರೋಪಿಗಳು ಗಾಂಜಾವನ್ನು ಆಂಧ್ರ ಪ್ರದೇಶದ ಹೈದಾರಾಬಾದ್‌ನಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಸಾಗಾಟ ಮಾಡಲು ಪ್ರಯತ್ನಿಸಿದ್ದು, ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಗರದ ಪಡೀಲ್‌ ಜಂಕ್ಷನ್‌ನಿಂದ ಬಿಕರ್ನಕಟ್ಟೆ ಬರುವ ರಸ್ತೆಯಲ್ಲಿ ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿತರಿಂದ 3,60,000 ರೂ. ಮೌಲ್ಯದ ಸುಮಾರು 24 ಕೆ.ಜಿ. ಗಾಂಜಾ ಹಾಗೂ 2 ಲಕ್ಷ ಮೌಲ್ಯದ ಟೂರಿಸ್ಟ್‌ ಕಾರು ಹಾಗೂ ೨೩ ಸಾವಿರ ರೂ. ಮೌಲ್ಯದ ಮೂರು ಮೊಬೈಲ್‌ ಪೋನ್‌ಗಳು ಸೇರಿದಂತೆ ಒಟ್ಟು 5,73,000 ರೂ. ಮೌಲ್ಯದ ಸೊತ್ತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಟೂರಿಸ್ಟ್‌ ಕಾರು ಮಹಾರಾಷ್ಟ್ರ ನೊಂದಣಿಯದ್ದಾಗಿದೆ.