LATEST NEWS
ಇಂದ್ರಜಿತ್ ಕೊಲೆ ಪ್ರಕರಣ 9 ಮಂದಿ ಆರೋಪಿಗಳ ಬಂಧನ
ಮಂಗಳೂರು ನವೆಂಬರ್ 28: ಇತ್ತೀಚೆಗಷ್ಟೇ ಬರ್ಬರವಾಗಿ ಹತ್ಯೆಯಾಗಿದ್ದ ರೌಡಿಶೀಟರ್ ಇಂದ್ರಜಿತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಬೋಳೂರಿನ ಮೋಕ್ಷಿತ್, ಉಲ್ಲಾಸ್ ಕಾಂಚನ್ (20), ಆಶಿಕ್ (23), ರಾಕೇಶ್ (28), ಗೌತಮ್ (25), ಕೌಶಿಕ್ (25), ನಿತಿನ್ (25), ಜಗದೀಶ್ ಅಲಿಯಾಸ್ ತಲವಾರ್ ಜಗ್ಗ(53), ಶರಣ್ ಅಲಿಯಾಸ್ ಚಾನು (19) ಎಂದು ಗುರುತಿಸಲಾಗಿದೆ.
ನವೆಂಬರ್ 25ರ ಬುಧವಾರ ತಡರಾತ್ರಿ ರೌಡಿಶೀಟರ್ ಇಂದ್ರಜಿತ್ ಎಂಬಾತನನ್ನು ಅಪರಿಚಿತರು ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಮರುದಿನ ನವೆಂಬರ್ 26 ರ ಬೆಳಗ್ಗೆ ಮೃತದೇಹ ಬೊಕ್ಕಪಟ್ನ ಬೋಟ್ ಯಾರ್ಡ್ ಬಳಿ ಪತ್ತೆಯಾಗಿತ್ತು. ಈ ಘಟನೆ ಕುರಿತಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಳೆಯ ದ್ವೇಷವೇ ಈ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
Facebook Comments
You may like
-
ಬಂಗಾರ್ ಪಲ್ಕೆಯ ಜಲಪಾತದ ಗುಡ್ಡ ಕುಸಿದು ಓರ್ವ ಮೃತ್ಯು
-
ಕಡಬ ಹೆದ್ದಾರಿಯಲ್ಲಿ ಭೀಕರ ಅಪಘಾತ; ಒಂದು ಬಲಿ..
-
ಮಹಿಳೆಯನ್ನು ಚುಡಾಯಿಸಿದ ವ್ಯಕ್ತಿಗೆ ಸಾರ್ವಜನಿಕರಿಂದ ಥಳಿತ; ಬಿದ್ದ ಏಟಿಗೆ ಸ್ಥಳದಲ್ಲೆ ಸಾವು
-
ಲಾರಿ ಚಾಲಕನ ಅವಾಂತರ-ಜನಸಾಮಾನ್ಯ ಪ್ರಾಣ ಉಳಿಸಿದ ಕಾಪು ಎಸೈ ರಾಘವೇಂದ್ರ
-
ಪರಿಸರ ಉಳಿಸುವಂತೆ ಹಸಿರು ದಳದಿಂದ ಆರಂಭವಾಗಿದೆ ಜಾಗೃತಿಯ ಆಗ್ರಹ…..
-
ಬಂಟ್ವಾಳ ಚರ್ಚ್ ಕಳ್ಳತನಕ್ಕೆ ಯತ್ನ; ಪವಿತ್ರ ಸೊತ್ತುಗಳಿಗೆ ಹಾನಿ
You must be logged in to post a comment Login