Connect with us

LATEST NEWS

ಪೆಟ್ರೋಲ್ ಡೀಸೆಲ್ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರಕಾರ – ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ

ದೆಹಲಿ : ಏರಿಕೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನುನಿಯಂತ್ರಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದೆ.


ಈ ಕುರಿತಂತೆ ಮಾಹಿತಿ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ ಪೆಟ್ರೋಲ್‌ಗೆ 9.50 ರೂಪಾಯಿ ಮತ್ತು ಪ್ರತಿ ಲೀಟರ್‌ ಡೀಸೆಲ್‌ಗೆ 6 ರೂಪಾಯಿ ಕಡಿತಗೊಳಿಸಿದೆ. ಪರಿಸ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಅಲ್ಲದೇ ಅಡುಗೆ ಸಿಲಿಂಡರ್‌ ದರ 200 ರೂ. ಕಡಿತ ಮಾಡಲಾಗಿದೆ.

ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ 5 ರಂದು ಪೆಟ್ರೋಲ್ ಮೇಲೆ 5 ರೂ. ಡಿಸೇಲ್ ಮೇಲೆ 10 ರೂಪಾಯಿ ಇಳಿಕೆ ಮಾಡಿತ್ತು. ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಬೆಲೆ ಇಳಿಕೆ ಮಾಡಿತ್ತು. ಈಗ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆ ಮುನ್ನ ಬೆಲೆ ಇಳಿಕೆ ಮಾಡಿದೆ. ಈ ಬಾರಿ ಎಲ್‌ಪಿಜಿಗೂ ಸಬ್ಸಿಡಿ ನೀಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *