Connect with us

LATEST NEWS

ನಮ್ಮ ಮೇಲೆ ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ ಎಂದು ಕಾನ್ ಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಬೆತ್ತಲಾದ ಮಹಿಳೆ

ಫ್ರಾನ್ಸ್ : ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಉಕ್ರೇನ್ ಮಹಿಳೆಯೊಬ್ಬರು ರಷ್ಯಾ ನಡೆಸುತ್ತಿರುವ ಯುದ್ದದ ವಿರುದ್ದ ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ,


ಮಹಿಳೆಯೊಬ್ಬರು ಬೆತ್ತಲಾಗಿ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಬಂದ ಮಹಿಳೆ ತಮ್ಮ ಮೈ ಮೇಲೆ ಉಕ್ರೇನಿಯನ್ ಧ್ವಜದ ಬಣ್ಣಗಳಲ್ಲಿ ‘ನಮ್ಮ ಮೇಲೆ ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ’ (Stop Raping Us) ಎಂದು ಬರೆಯಲಾಗಿದೆ. ಕೆಂಪು ಬಣ್ಣದ ಟಾಪ್‌ಲೆಸ್‌ ಉಡುಪು ಧರಿಸಿದ್ದ ಮಹಿಳೆಯೊಬ್ಬರು ಕಿರುಚುತ್ತಾ ಛಾಯಾಗ್ರಾಹಕರ ಮುಂದೆ ಏಕಾಏಕಿ ಓಡಿಬಂದಿದ್ದರು. ಕೂಡಲೇ ಸ್ಥಳದಲ್ಲಿದ ಭದ್ರತಾ ಸಿಬ್ಬಂದಿ ಆಕೆಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement
Click to comment

You must be logged in to post a comment Login

Leave a Reply