Connect with us

    LATEST NEWS

    ಮರಳು ದಿಬ್ಬಗಳ ತೆರವು ಹಾಗೂ ಸಾಗಾಣಿಕೆ ನಿಷೇಧ : ಉಡುಪಿ ಜಿಲ್ಲಾಧಿಕಾರಿ ಆದೇಶ

    ಉಡುಪಿ, ಮೇ 21 : ಉಡುಪಿ ಜಿಲ್ಲಾ ಕರಾವಳಿ ನಿಯಂತ್ರಣ ವಲಯದ ನದಿ ಪಾತ್ರಗಳಲ್ಲಿನ ಮರಳು ದಿಬ್ಬ ತೆರವುಗೊಳಿಸುವ ಸಂಬAಧ ಒಟ್ಟು 161 ತಾತ್ಕಾಲಿಕ ಮರಳು ಪರವಾನಿಗೆಯನ್ನು ವಿತರಿಸಲಾಗಿರುತ್ತದೆ. ಅವುಗಳಲ್ಲಿ ಕುಂದಾಪುರ ತಾಲ್ಲೂಕು ವ್ಯಾಪ್ತಿಯ 04 ಮರಳು ದಿಬ್ಬಗಳನ್ನು ತೆರವುಗೊಳಿಸಲು ವಿತರಿಸಲಾದ ಒಟ್ಟು 39 ತಾತ್ಕಾಲಿಕ ಮರಳು ಪರವಾನಿಗೆಗಳಿಗೆ ಸಂಬಂಧಿಸಿದಂತೆ KSCZMA ಯಿಂದ ನೀಡಲಾದ ನಿರಾಕ್ಷೇಪಣಾ ಪತ್ರದ ಅವಧಿಯು ದಿನಾಂಕ: 29.03.2022 ರಂದು ಮುಕ್ತಾಯಗೊಂಡಿದ್ದು, ಸದರಿ ಪರವಾನಿಗೆಗಳನ್ನು ಈಗಾಗಲೇ ತಡೆಹಿಡಿಯಲಾಗಿರುತ್ತದೆ ಹಾಗೂ ಸ್ಥಗಿತಗೊಳಿಸಲಾಗಿರುತ್ತದೆ.


    ಉಡುಪಿ ಮತ್ತು ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯ ಒಟ್ಟು 19 ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬAಧ ವಿತರಿಸಲಾದ ಒಟ್ಟು 122 ತಾತ್ಕಾಲಿಕ ಮರಳು ಪರವಾನಿಗೆಗಳಿಗೆ ಸಂಬAಧಿಸಿದAತೆ ಏSಅZಒಂ ಯಿಂದ ನೀಡಲಾದ ನಿರಾಕ್ಷೇಪಣಾ ಪತ್ರದ ಅವಧಿಯು ದಿನಾಂಕ:22.08.2022 ರವರೆಗೆ ಇರುವುದಾಗ್ಯೂ ಪ್ರಸ್ತುತ ಮಾನ್ಯ ಹಸಿರು ಪೀಠ ನ್ಯಾಯಾಲಯ, ದಕ್ಷಿಣ ವಲಯ ಚೆನೈ ನ ಆದೇಶದನುಸಾರ ಉಡುಪಿ ಜಿಲ್ಲಾ 07 ಸದಸ್ಯರ ಸಮಿತಿಯು ಜಿಲ್ಲಾ ವ್ಯಾಪ್ತಿಯಲ್ಲಿ ಮಾನ್ಯ ನ್ಯಾಯಾಲಯದ ಆದೇಶದನ್ವಯ ಕ್ರಮ ಕೈಗೊಂಡಿದ್ದು, ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ನೀಡಲಾದ ಚಾಲ್ತಿಯಲ್ಲಿರುವ ಒಟ್ಟು 122 ತಾತ್ಕಾಲಿಕ ಮರಳು ಪರವಾನಿಗೆಗಳನ್ನು ILMS ತಂತ್ರಾAಶದಲ್ಲಿ ತಡೆಹಿಡಿಯಲು ಮಾನ್ಯ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು ರವರಿಗೆ ಪತ್ರದ ಮೂಲಕ ಕೋರಲಾಗಿರುತ್ತದೆ.

    ಅದರಂತೆ ILMS ತಂತ್ರಾಂಶದಲ್ಲಿ ಒಟ್ಟು 122 ಪರವಾನಿಗೆಗಳನ್ನು ತಡೆಹಿಡಿದು, ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಹಾಗೂ ಮರಳು ಸಾಗಾಣಿಕೆಯನ್ನು ನಿರ್ಭಂದಿಸಲಾಗಿರುತ್ತದೆ ಹಾಗೂ ತಾತ್ಕಾಲಿಕ ಮರಳು ಪರವಾನಿಗೆದಾರರಿಗೆ ಮರಳು ತೆರವುಗೊಳಿಸುವುದನ್ನು ಸ್ಥಗಿತಗೊಳಿಸಿ, ಮರಳು ದಿಬ್ಬ ಪ್ರದೇಶಗಳಿಂದ ಮರಳು ತೆರವುಗೊಳಿಸಲು ಬಳಸುವ ದೋಣಿಗಳನ್ನು ಹಾಗೂ ಮರಳು ದಕ್ಕೆ ಪ್ರದೇಶದಿಂದ ಮರಳು ಸಾಗಾಣಿಕೆಗೆ ಬಳಸುವ ವಾಹನಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ.
    ಪ್ರಸ್ತುತ ಉಡುಪಿ ಜಿಲ್ಲಾ ವ್ಯಾಪ್ತಿಯ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬ ತೆರವುಗೊಳಿಸುವುದನ್ನು ಹಾಗೂ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply