Connect with us

BELTHANGADI

ವಿದ್ಯುತ್ ಶಾಕ್ ತಗುಲಿ ಕಂಬದಲ್ಲೇ ಸಾವನಪ್ಪಿದ ಕಾರ್ಮಿಕ

ಪುತ್ತೂರು ನವೆಂಬರ್ 27: ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭ ವಿದ್ಯುತ್ ಶಾಕ್ ತಗುಲಿ ಓರ್ವ ಮೃತಪಟ್ಟು ಇಬ್ಬರಿಗೆ ಗಾಯಗಳಾಗಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಂಜ ಶಾಲೆತ್ತಾಡ್ಕ ಎಂಬಲ್ಲಿ ನಡೆದಿದೆ.


ಮೃತ ದುರ್ದೈವಿಯನ್ನು ಪ್ರತಾಪ್ ಮೂಡಬಿದ್ರೆ (20) ಎಂದು ಗುರುತಿಸಲಾಗಿದೆ. ಇವರು ಮೂಡಬಿದಿರೆ ಖಾಸಗಿ ಗುತ್ತಿಗೆದಾರರ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಂಜ ಎಂಬಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭ ವಿದ್ಯುತ್ ಕಂಬದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ಪಸರಿಸಿ ಕಂಬದಲ್ಲಿದ್ದ ಪ್ರತಾಪ್ ಮೂಡಬಿದ್ರೆ ಸ್ಥಳದಲ್ಲೇ ಸಾವನಪ್ಪಿದ್ದು, ನಾಗಪ್ಪ ಹಾಗೂ ಕಿಶೋರ್ ಎಂಬವರಿಗೆ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

Facebook Comments

comments