Connect with us

    LATEST NEWS

    ಪಂಪ್ ವೆಲ್ ರಸ್ತೆಗೆ ನಳಿನ್ ಕಟೀಲ್‌ ಸೀಸನಲ್ ಲೇಕ್ ಎಂದು ಮರು ನಾಮಕರಣ ಮಾಡಿದ ನೆಟ್ಟಿಗರು

    ಮಂಗಳೂರು ಜುಲೈ 05: ಗೂಗಲ್ ಮ್ಯಾಪ್ ನಲ್ಲಿ ಮಂಗಳೂರಿನ ಪ್ರಖ್ಯಾತ ಪಂಪ್ ವೆಲ್ ಪ್ಲೈಓವರ್ ನ ಕೆಳಗಿನ ರಸ್ತೆಯ ಹೆಸರನ್ನು ‘ನಳಿನ್ ಕಟೀಲ್‌ ಸೀಸನಲ್ ಲೇಕ್’ ಎಂದು ಬದಲಾಯಿಸಿ ಟ್ರೋಲಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದೀಗ ಭಾರೀ ವೈರಲ್ ಆಗಿದೆ.


    ಮಂಗಳೂರಿನ ಹೆಸರಾಂತ ಪಂಪ್ ವೆಲ್ ಪ್ಲೈಓವರ್ ತನ್ನ ನಿಧಾನಗತಿಯ ನಿರ್ಮಾಣದಿಂದಾಗಿ ವಿಶ್ವದಾದ್ಯಂತ ಹೆಸರು ಪಡೆದಿತ್ತು, ನಂತರ ಈ ಬಾರಿ ಮಳೆಗಾಲದಲ್ಲಿ ಮೊದಲ ಮಳೆಗೆ ಪಂಪ್ ವೆಲ್ ಪ್ಲೈಓವರ್ ಕೆಳ ರಸ್ತೆಯಲ್ಲಿ ನೀರು ನಿಂತು ಕೃತಕ ಕೆರೆ ನಿರ್ಮಾಣವಾಗಿ ಮತ್ತೆ ಸುದ್ದಿಯಾಗಿತ್ತು,  ಈ ಸುದ್ದಿ ಟ್ರೋಲ್ ಪೇಜ್ ಗಳಲ್ಲಿ ಟ್ರೋಲ್ ಆಗಿ ಸಖತ್ ವೈರಲ್ ಆಗಿತ್ತು.

    ಈಗ ಕೆಲವು ಟ್ರೋಲ್ ಪೇಜ್ ಗಳು ಗೂಗಲ್ ಮ್ಯಾಪ್ ನಲ್ಲಿ ಪಂಪ್‌ವೆಲ್ ಮೇಲ್ಸೇತುವೆಗೆ ‘ಪಂಪ್‌ವೆಲ್ – ದಿ ಗ್ರೇಟ್‌ ವಾಲ್‌ ಆಫ್ ಪಂಪ್‌ವೆಲ್’ ಎಂದು ಬದಲಾಯಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ ನೀರು ನಿಂತಿದ್ದ ಕೆಳ ರಸ್ತೆಯನ್ನು ನಳಿನ್ ಕಟೀಲ್‌ ಸೀಸನಲ್ ಲೇಕ್ ಎಂದು ಬದಲಾಯಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply