LATEST NEWS
ಕರಾವಳಿಗರಿಗೆ ತಿಳುವಳಿಕೆ ಇಲ್ಲ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಗರಂ ಆದ ಕರಾವಳಿಗರು
ಕರಾವಳಿಗರಿಗೆ ತಿಳುವಳಿಕೆ ಇಲ್ಲ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಗರಂ ಆದ ಕರಾವಳಿಗರು
ಉಡುಪಿ ಮಾರ್ಚ್ 19: ಉಡುಪಿ ಜಿಲ್ಲೆಯ ಕಾರ್ಕಳ , ಕಾಪು ಹಾಗೂ ಬ್ರಹ್ಮಾರ ಸೇರಿದಂತೆ ಕರಾವಳಿಯ ಜನರಿಗೆ ತಿಳುವಳಿಕೆ ಇಲ್ಲ ಎಂದು ಹೇಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಕರಾವಳಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಗರಂ ಆಗಿರುವ ಕರಾವಳಿಗರು. ತಿಳುವಳಿಕೆ ಇರೋದಕ್ಕೆ ನಾವು ಕುಟುಂಬ ರಾಜಕಾರದ ಹಿಂದೆ ಬಿದ್ದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಸಿಎಂ ಆಗಿದ್ದಾಗ ಎಷ್ಟು ಕೊಟ್ಟಿದ್ದೀರಿ, ಈ ಬಜೆಟ್ ಮಂಡನೆ ಸಂದರ್ಭ ಕೊಟ್ಟದ್ದೆಷ್ಟು ಗೊತ್ತಿದೆ. ತಿಳುವಳಿಕೆ ಇದ್ದದ್ದಕ್ಕೆ ಬಿಜೆಪಿಗೆ ವೋಟ್ ಹಾಕ್ತೇವೆ. ನಮಗೆ ತಿಳುವಳಿಕೆ ಇದೆ. ಕುಟುಂಬ ರಾಜಕಾರಣಕ್ಕೆ ನಾವು ವೋಟ್ ಹಾಕಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇರುವ ಪ್ರಮೋದ್ ಮಧ್ವರಾಜ್ ಅವರಿಗೂ ಆಕ್ರೋಶ ವ್ಯಕ್ತಪಡಿಸಿರುವ ಕರಾವಳಿಗರು, ಪ್ರಮೋದ್ ಮಧ್ವರಾಜ್ ಜೆಡಿಎಸ್ ಸೇರಿ ಬುದ್ದಿಯಿಲ್ಲ ಎನ್ನುವುದನ್ನು ಪ್ರೂವ್ ಮಾಡುತ್ತಿದ್ದಾರೆ ಎಂದು ಇದೇ ವೇಳೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಈ ಹೇಳಿಕೆಗೆ ವಿರುದ್ದ ದೇಶ ವಿದೇಶಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಅವರ ಈ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಸಿಎಂ ಕುರಿತಾದ ವೈಯಕ್ತಿಕ ನಿಂದನೆಗಳಿಗೂ ಈ ಹೇಳಿಕೆ ಕಾರಣವಾಗಿದೆ.
ಕರಾವಳಿ ಬಗ್ಗೆ ಮುಖ್ಯಮಂತ್ರಿ ಹೇಳಿದ್ದೇನು..?
ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಸಿಎಂ, ಉಡುಪಿ, ಕಾರ್ಕಳ ಕಾಪು ಸೇರಿದಂತೆ ಕರಾವಳಿ ಭಾಗದ ಜನರಿಗೆ ತಿಳುವಳಿಕೆ ಇಲ್ಲ. ಅಲ್ಲಿಯ ಜನ ಬಿಜೆಪಿಗೆ ಮಾತ್ರ ವೋಟ್ ಹಾಕ್ತಾರೆ. ಬಿಜೆಪಿಯನ್ನು ಗೆಲ್ಲಿಸುವ ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದ ಜನರಿಗೆ ಶಾಲೆ ಕಾಲೇಜು ಕಟ್ಟಿಸಿಕೊಡಲು ಕುಮಾರಸ್ವಾಮಿ, ರೇವಣ್ಣನೇ ಬೇಕು ಎಂದು ಕಿಚಾಯಿಸಿದ್ದರು.