ಖಾಸಗಿ ಬಸ್ – ಬೈಕ್ ಡಿಕ್ಕಿ ಡಿಎಆರ್ ಸಿಬ್ಬಂದಿ ಸ್ಥಳದಲ್ಲೇ ಸಾವು

ಮಂಗಳೂರು ಮಾರ್ಚ್ 19: ಖಾಸಗಿ ಬಸ್ – ಬೈಕ್ ಮುಖಾಮುಖಿ ಡಿಕ್ಕಿಯಾಗಿ ಡಿಎಆರ್ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಮಂಗಳೂರಿನಲ್ಲಿ ಡಿಎಆರ್ ಸಿಬ್ಬಂದಿ ಮಹೇಶ್ ಲಮಾಣಿ(29) ಎಂದು ಗುರುತಿಸಲಾಗಿದೆ. ಮಂಗಳೂರಿನ ಐಜಿ ಮನೆಯಲ್ಲಿ ಆರ್ಡರ್ಲೀ ಕೆಲಸಕ್ಕಿದ್ದ ಇವರು ಉತ್ತರ ಕರ್ನಾಟಕ ಮೂಲದವರಾಗಿದ್ದು ಮೂಡಬಿದ್ರೆ ಬೆಳುವಾಯಿಯಲ್ಲಿ ಮನೆ ಮಾಡಿಕೊಂಡಿದ್ದು ಇಂದು ಕೆಲಸಕ್ಕೆ ಬೈಕ್ ನಲ್ಲಿ ಬರುವ ಸಂದರ್ಭ ಮಂಗಳೂರು ಹೊರವಲಯದ ಗುರುಪುರ ಹೆದ್ದಾರಿಯಲ್ಲಿ ಖಾಸಗಿ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.