FILM
ಪವನ್ ಕಲ್ಯಾಣ್ ಬರ್ತ್ ಡೇ- ಬ್ಯಾನರ್ ಕಟ್ಟುವಾಗ ಶಾಕ್ ತಗುಲಿ ಮೂವರ ಸಾವು

ಕೋಲಾರ/ಚಿತ್ತೂರು: ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಶಾಕ್ ತಗುಲಿ ನಾಲ್ವರು ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಶಾಂತಿಪುರಂ ಬಳಿಯ ಕಡಪಲ್ಲಿಯಲ್ಲಿ ನಡೆದಿದೆ.ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಬ್ಯಾನರ್ ಕಟ್ಟುತ್ತಿರುವ ವೇಳೆ ಈ ಅವಘಢ ಸಂಭವಿಸಿದೆ.
ರಾಜೇಂದ್ರ ಪ್ರಸಾದ್ (31), ಸೋಮಶೇಖರ್ (29), ಅರುಣಾಚಲಂ (20) ಮೃತರು. ಪವನ್, ಹರಿ, ಸಂತೋಷ್, ಸುಬ್ರಹ್ಮಣ್ಯ ಗಾಯಾಳುಗಳು. ನಾಲ್ವರು ಗಾಯಾಳುಗಳನ್ನು ಕುಪ್ಪಂ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಿ ಚಿಕಿತ್ಸ ನೀಡಲಾಗುತ್ತಿದೆ.
ಬ್ಯಾನರ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿದ ಹಿನ್ನೆಲೆ ಈ ಅವಘಢ ಸಂಭವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶಾಂತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
