Connect with us

LATEST NEWS

ಮರದ ಕೊಂಬೆ ಕಡಿಯುವಾಗ ಆಯತಪ್ಪಿ ಬಿದ್ದು ಯುವಕ ಸಾವು

ಪುತ್ತೂರು ಸೆಪ್ಟೆಂಬರ್ 2: ಮರದ ಕೊಂಬೆ ಕಡಿಯುವ ಸಂದರ್ಭ ಆಕಸ್ಮಿಕವಾಗಿ ಕೆಳಗೆ ಬಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ನೆಲ್ಯಾಡಿ ಸಮೀಪ ಗೋಳಿತೊಟ್ಟು ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ಕೊಣಾಲು ಗ್ರಾಮದ ಇಸ್ಮಾಯಿಲ್ (25) ಎಂದು ಗುರುತಿಸಲಾಗಿದೆ. ಮಾವಿನ ಮರದ ಕೊಂಬೆ ಕಡಿಯುವ ಸಂದರ್ಭ ಇಸ್ಮಾಯಿಲ್ ಆಯತಪ್ಪಿ ಕೆಳಗೆ ಬಿದ್ದು ಗಂಭೀರಗಾಯಗೊಂಡಿದ್ದರು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.