Connect with us

National

ಕೊರೊನಾಗೆ ಔಷಧಿ ಕಂಡು ಹಿಡಿದ ಪತಂಜಲಿ

5-14 ದಿನಗಳಲ್ಲಿ ಸಂಪೂರ್ಣ ಗುಣಮುಖರಾದ ಕೊರೊನಾ ರೋಗಿಗಳು

ನವದೆಹಲಿ ಜೂನ್ 14: ವಿಶ್ವದ ದಿಗ್ಗಜ ಔಷಧಿ ಕಂಪೆನಿಗಳು ಕೊರೊನಾಗೆ ಚಿಕಿತ್ಸೆ ಕಂಡು ಹಿಡಿಯಲು ಸಂಶೋಧನೆಗಳನ್ನು ನಡೆಸುತ್ತಿರುವ ಬೆನ್ನಲೆ ಬಾಬಾ ರಾವ್ ದೇವ್ ಅವರ ಆಯುರ್ವೇದ ಔಷಧ ಕಂಪೆನಿ ಕೊರೊನಾ ಸೊಂಕಿಗೆ ಔಷಧ ಕಂಡು ಹಿಡಿದಿದ್ದೇವೆ ಎಂದು ತಿಳಿಸಿದೆ.


ಈ ಕುರಿತಂತೆ ಸುದ್ದಿ ಸಂಸ್ಥೆ ಎಎನ್ ಐಗೆ ಸಂದರ್ಭ ನೀಡಿರುವ ಪತಂಜಲಿ ಸಂಸ್ಥೆಯ ಸಹ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಕೊರೊನಾಗೆ ಸೂಕ್ತ ಚಿಕಿತ್ಸೆಯನ್ನು ನಾವು ಕಂಡು ಹಿಡಿದಿದ್ದು, ಅದನ್ನು ಈಗಾಗಲೇ ಕೊರೊನಾ ಪಾಸಿಟಿವ್​ ಬಂದಿರುವ ರೋಗಿಯ ಮೇಲೆ ಪ್ರಯೋಗಿಸಲಾಗಿದೆ.


ಇದರಲ್ಲಿ 100 ಪರ್ಸೆಂಟ್​ ಫಲಿತಾಂಶ ಬಂದಿದೆ. ರೋಗಿಗಳು 5-14 ದಿನಗಳ ಒಳಗಾಗಿ ಗುಣಮುಖರಾಗಿದ್ದಾರೆ ಎಂದಿದ್ದು ನಾವು ಕೊರೊನಾವನ್ನು ಆಯುರ್ವೇದದಿಂದ ಗುಣಪಡಿಸ್ತೇವೆ ಎಂದಿದ್ದಾರೆ. ಇನ್ನೂ ನಾಲ್ಕೈದು ದಿನದಲ್ಲಿ ಈ ಬಗ್ಗೆ ಸಾಕ್ಷಿ ಹಾಗೂ ಡೇಟಾಗಳನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *