Connect with us

    LATEST NEWS

    ಸಾನಿಯಾ ಶೋಯೆಬ್ ಮಲ್ಲಿಕ್ ನಡುವೆ ಹುಳಿ ಹಿಂಡಿದ ಆಯೆಷಾ ಒಮರ್

    ಮುಂಬೈ ನವೆಂಬರ್ 12: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ತಮ್ಮ 12 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದು, ಶೋಯೆಬ್ ಮಲ್ಲಿಕ್ ಅವರ ಸ್ನೇಹಿತರೊಬ್ಬರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.


    ಕಳೆದ ಕೆಲವು ದಿನಗಳಿಂದ ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವೈಯಕ್ತಿಕ ಬದುಕಿನಲ್ಲಿ ಉಂಟಾಗಿರುವ ಬಿರುಕಿನ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಈ ದಂಪತಿಗಳು ಈಗಾಗಲೇ ಬಹಳ ದಿನದಿಂದ ಬೇರೆ ಬೇರೆಯಾಗಿ ವಾಸಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಎಲ್ಲಾ ಕಾನೂನು ಸಮಸ್ಯೆಗಳನ್ನು ಬಗೆ ಹರಿಸಿಕೊಂಡ ನಂತರ ವಿಚ್ಛೇದನದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.


    ಇನ್ನು ಇವರಿಬ್ಬರ ನಡುವೆ ಬಿರುಕು ಮೂಡಲು ಪಾಕಿಸ್ತಾನ ನಟಿಯೊಬ್ಬಳು ಕಾರಣ ಎಂದು ಹೇಳಲಾಗುತ್ತಿದೆ. ಆಯೆಷಾ ಒಮರ್ ಪಾಕಿಸ್ತಾನ ಮೂಲದ ಮಾಡೆಲ್, ನಟಿ ಹಾಗೂ ಯೂಟ್ಯೂಬರ್ ಆಗಿ ಪ್ರಖ್ಯಾತಿ ಗಳಿಸಿದ್ದಾರೆ. ಆಯೆಷಾ ಪಾಕಿಸ್ತಾನದ ಖ್ಯಾತ ಸಿನಿಮಾಗಳಾದ ‘ಕರಾಚಿ ಸೆ ಲಾಹೋರ್'(2015), ಯಲ್ಘಾರ್(2017), ಕಾಫ್ ಕಂಗನಾ(2019) ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.


    ಕೆಲ ಮೂಲಗಳ ಪ್ರಕಾರ, ಆಯೆಷಾ ಒಮರ್ ಗರಿಷ್ಠ ಸಂಭಾವನೆ ಪಡೆಯುವ ನಟಿಯಾಗಿದ್ದು, ಯೂಟ್ಯೂಬ್‌ನಲ್ಲೂ ಸಾಕಷ್ಟು ಅಭಿಮಾನಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಆಯೆಷಾ ಒಮರ್, ತಾರಾ ಕ್ರಿಕೆಟಿಗ ಶೋಯೆಬ್ ಮಲಿಕ್ ಜತೆ ಬೋಲ್ಡ್ ಆಗಿ ಫೋಟೊ ಕ್ಲಿಕ್ಕಿಸಿಕೊಂಡು ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರು. ಇದೇ ಈಗ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಾಂಪತ್ಯ ಜೀವನ ಬೇರ್ಪಡಲು ಕಾರಣ ಎನ್ನಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply