Connect with us

    LATEST NEWS

    ಪಾಕಿಸ್ತಾನ ವಿಧ್ಯಾರ್ಥಿನಿಯ ಮಾದಕ ನೃತ್ಯದ ವಿಡಿಯೋ ವೈರಲ್…!!

    ಪಾಕಿಸ್ತಾನ ಅಕ್ಟೋಬರ್ 22: ಪಾಕಿಸ್ತಾನ ವಿಧ್ಯಾರ್ಥಿನಿಯೊಬ್ಬಳ ಮಾದಕ ನೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಈ ಮಾದಕ ನೃತ್ಯ ಮಾಡಿದ್ದಕ್ಕೆ ಕಾಲೇಜಿಗೆ ಸಂಬಂಧಿಸಿದ ವಿಶ್ವವಿದ್ಯಾಲಯ ಕೆಂಡಾಮಂಡಲವಾಗಿದೆ. ಪೇಶಾವರದ ಎನ್‌ಸಿಎಸ್ ವಿಶ್ವವಿದ್ಯಾಲಯಕ್ಕೆ ಖೈಬರ್ ವೈದ್ಯಕೀಯ ವಿಶ್ವವಿದ್ಯಾಲಯವು ನೋಟಿಸ್ ನೀಡಿದೆ.


    23 ಸೆಕೆಂಡುಗಳ ವೀಡಿಯೊದಲ್ಲಿ, ಯುವತಿಯೋರ್ವಳು ಮಾದಕ ಬಟ್ಟೆ ಧರಿಸಿ ವೇದಿಕೆ ಮೇಲೆ ಹಾಡುತ್ತಾ ಜೊತೆಗೆ ನೃತ್ಯ ಮಾಡುವುದನ್ನು ಕಾಣಬಹುದು. ಈ ವಿಡಿಯೋ ವೈರಲ್ ಆಗಿದ್ದು ಇದಕ್ಕೆ ಟೀಕೆಗಳು ವ್ಯಕ್ತವಾಗಿದೆ. ಇನ್ನು ದೇಶದಲ್ಲಿ ಇಂತಹ ಘಟನೆಗಳ ಅಗತ್ಯತೆಯ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ.

    ವೇದಿಕೆಯಲ್ಲಿ ಕೆಎಂಯುನ ಲಾಂಛನ ಮತ್ತು ಹೆಸರಿನೊಂದಿಗೆ ಇಂತಹ ಚಟುವಟಿಕೆಗಳನ್ನು ನಡೆಸುವುದು ಸಾಕಷ್ಟು ಆಕ್ಷೇಪಾರ್ಹವಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಎಲ್ಲಾ ಪಠ್ಯಕ್ರಮ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ನೈತಿಕ ಮತ್ತು ಅನೈತಿಕ ಮಾನದಂಡಗಳನ್ನು ಮತ್ತು ಸಂಸ್ಥೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಬದ್ಧರಾಗಿರಿ ಎಂದು ರಿಜಿಸ್ಟ್ರಾರ್ ಪತ್ರದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ನಿರ್ದೇಶಿಸಲಾಗಿದೆ. ಇಲ್ಲದಿದ್ದರೆ ಸಂಸ್ಥೆಯ ವಿರುದ್ಧ ಕಠಿಣ ಶಿಸ್ತಿನ ಕ್ರಮವನ್ನು ಜರುಗಿಸಲಾಗುವುದು.ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply