Connect with us

    LATEST NEWS

    ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರಗೊಂಡಿದ್ದ ಬಾಲಕ ಸಮರ್ಥ್ ಸಾವು…!!

    ಉಡುಪಿ ಸೆಪ್ಟೆಂಬರ್ 15: ನಿನ್ನೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸಮರ್ಥ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.


    ಕಾಪು ಸಮೀಪದ ಆನೆಗುಂದಿ ಸರಸ್ವತಿ ಪೀಠದಲ್ಲಿ ಸಮರ್ಥ ಏಳನೇ ತರಗತಿ ಓದುತ್ತಿದ್ದು, ಇತ್ತೀಚೆಗೆ ಗಣೇಶ ಹಬ್ಬಕ್ಕೆಂದು ಊರಿಗೆ ತೆರಳಿದ್ದಾನೆ. ಮಂಗಳವಾರು ಬೆಳಗಾವಿಯಿಂದ ತಂದೆ ಜೊತೆ ಉಚ್ಚಿಲಕ್ಕೆ ಆಗಮಿಸಿದ ಸಮರ್ಥ, ಸರಕಾರಿ ಬಸ್ ನಿಂದ ಇಳಿದು ರಸ್ತೆ ಬದಿಯಲ್ಲಿ ನಿಂತಿದ್ದ, ಈ ಸಂದರ್ಭ ಅಪರಿಚಿತ ವಾಹನವೊಂದು ತಂದೆ ಮಗನಿಗೆ ಡಿಕ್ಕಿ ಹೊಡೆದಿದೆ.

    ಈ ಅಪಘಾತದಲ್ಲಿ ಸಮರ್ಥ ತಂದೆ ಪ್ರಭಾಕರ್ ಶಂಕರ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಅವರ ಮಗ ಸಮರ್ಥ್ ಇಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ಈ ಘಟನೆಯಿಂದಾಗಿ ಬೆಳಗಾವಿಯ ಕುಟುಂಬಕ್ಕೆ ಬರಸಿಡಿಲು ಎರಗಿದಂತಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply