LATEST NEWS
ಟ್ರಂಪ್ ಮತ್ತು ಝಲೆನ್‌ಸ್ಕಿ ನಡುವೆ ವಾಗ್ವಾದ – ಝೆಲೆನ್ಸ್ಕಿಗೆ ಶಾಂತಿ ಬೇಡ ಜನ ಸಾಯುವುದನ್ನು ಇಷ್ಟಪಡುತ್ತಿದ್ದಾರೆ ಎಂದ ಟ್ರಂಪ್

ನ್ಯೂಯಾರ್ಕ್ ಮಾರ್ಚ್ 01: ಅಮೇರಿಕ ಅಧ್ಯಕ್ಷ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ನಡುವೆ ಮಾಧ್ಯಮಗಳ ಎದುರೇ ಮಾತಿನ ಚಕಮಕಿ ನಡೆದಿದೆ.
ಅಮೆರಿಕ -ಉಕ್ರೇನ್ ನಡುವಿನ ಖನಿಜ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಆಗಮಿಸಿದ ಮೇಳೆ ಈ ಘಟನೆ ನಡೆದಿದೆ. ಖನಿಜ ಒಪ್ಪಂದ ವಿಚಾರವಾಗಿ ಓವಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಷ್ಯಾ, ಉಕ್ರೇನ್ ಯುದ್ಧ ವಿಚಾರವನ್ನು ಪ್ರಸ್ತಾಪಿಸಲಾಗಿದ್ದು, ಈ ವೇಳೆ ಉಭಯ ನಾಯಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ಖನಿಜ ಒಪ್ಪಂದಕ್ಕೆ ಸಹಿ ಹಾಕದೆಯೇ ಝಲೆನ್‌ಸ್ಕಿ ಅವರು ಕೂಡಲೇ ಸಭೆಯಿಂದ ಹೊರನಡೆದಿದ್ದಾರೆ.
ಸಭೆಯಲ್ಲಿ ಟ್ರಂಪ್ ಝೆಲೆನ್ಸ್ಕಿಯವರು ಕದನ ವಿರಾಮವನ್ನು ಬಯಸುವುದಿಲ್ಲ ಮತ್ತು ನಿಮ್ಮ ಜನರನ್ನು ಸಾಯಲು ಬಿಡುತ್ತಿದ್ದಾರೆ ಎಂದು ಆರೋಪಿಸಿದರು. “ನೀವು ಲಕ್ಷಾಂತರ ಜನರ ಜೀವದೊಂದಿಗೆ ಜೂಜಾಡುತ್ತಿದ್ದೀರಿ. ನೀವು ಮೂರನೇ ಮಹಾಯುದ್ಧದೊಂದಿಗೆ ಜೂಜಾಡುತ್ತಿದ್ದೀರಿ, ಮತ್ತು ನೀವು ಮಾಡುತ್ತಿರುವುದು ದೇಶಕ್ಕೆ ತುಂಬಾ ಅವಮಾನಕರವಾಗಿದೆ, ಈ ದೇಶವು ನೀವು (ಝೆಲೆನ್ಸ್ಕಿ) ಧನ್ಯವಾದ ಹೇಳಬೇಕೆಂದು ಅನೇಕ ಜನರು ಹೇಳಿದ್ದಕ್ಕಿಂತ ಹೆಚ್ಚಿನದಾಗಿದೆ” ಎಂದು ಅವರು ಝೆಲೆನ್ಸ್ಕಿ ಅವರನ್ನು ಟೀಕಿಸಿದರು.
