KARNATAKA
ಯೂ ಟರ್ನ್ ಹೊಡೆದ ಪೊಲೀಸ್ ಇಲಾಖೆ – ಮಸೀದಿ ಧ್ವನಿವರ್ಧಕ ತೆರವಿಗೆ ಯಾವುದೇ ಆದೇಶ ನೀಡಿಲ್ಲ
ಬೆಂಗಳೂರು ನವೆಂಬರ್ 6: ಸಾರ್ವಜನಿಕರಿಗೆ ಮಸೀದಿಯಲ್ಲಿ ಬಳಸುತ್ತಿರುವ ಧ್ವನಿವರ್ಧಕದಿಂದ ಸಮಸ್ಯೆಯಾಗುತ್ತಿದ್ದರೆ ಅದನ್ನು ತೆರವುಗೊಳಿಸಬೇಕು ಎಂಬ ಸುತ್ತೋಲೆ ಹೊರಡಿಸಿದ್ದ ಪೊಲೀಸ್ ಇಲಾಖೆ ಈಗ ತನ್ನದೆ ಸುತ್ತೋಲೆಯ ಪ್ಯಾಕ್ಟ್ ಚೆಕ್ ಮಾಡಿದೆ. ಡಿಜಿಪಿ ಪರವಾಗಿ ಎಐಜಿಪಿ ಸುತ್ತೋಲೆ ಹೊರಡಿಸಿದ್ದರು ಅದನ್ನು ಪೊಲೀಸ್ ಇಲಾಖೆಯ ಗುಮಾಸ್ತರು ಮಾಡಿದ ಕೆಲಸ ಎಂದು ಸಮಜಾಯಿಷಿ ನೀಡಿದ್ದಾರೆ.
ಈ ಕುರಿತಂತೆ ತಮ್ಮ ಪ್ಯಾಕ್ಟ್ ಚೆಕ್ ವೆಬ್ ಸೈಟ್ ನಲ್ಲಿ ಮಾಹಿತಿ ಪ್ರಕಟಿಸಿರುವ ಪೊಲೀಸ್ ಇಲಾಖೆ – ಈ ಬಗ್ಗೆ ಪರಿಶೀಲಿಸಿದಾಗ ತಿಳಿದು ಬಂದಿದ್ದೇನೆಂದರೆ , ಈ ಪತ್ರವನ್ನು ಹಿರಿಯ ಅಧಿಕಾರಿಗಳ ಒಪ್ಪಿಗೆ ಇಲ್ಲದೆ ಗುಮಾಸ್ತರು ಕಿಡಿಗೇಡಿತನದಿಂದ ಕರ್ನಾಟಕ ರಾಜ್ಯದ ಪೊಲೀಸ್ ಕಮಿಷನರಗಳು ಹಾಗೂ ಜಿಲ್ಲಾ sp ಗಳಿಗೆ ಕಳುಹಿಸಿರತ್ತಾರೆ. ಆದರೆ ಈ ರೀತಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಸೀದಿಗಳಲ್ಲಿರುವ ಧ್ವನಿ ವರ್ಧಕಗಳನ್ನು ತೆಗೆಯುವಂತ ಯಾವುದೇ ನಿರ್ದೇಶನವನ್ನು ಪೊಲೀಸ್ ಇಲಾಖೆಯಿಂದ ನೀಡಿರುವುದಿಲ್ಲ.
ಈ ಬಗ್ಗೆ ಮುಂದಿನ ವಿಚಾರಣೆಗೆ ಆದೇಶಿಸಲಾಗಿದೆ ಸಾರ್ವಜನಿಕರು ಇಂತಹ ಗಾಳಿಸುದ್ದಿ ಅಥವಾ ಹಾದಿತಪ್ಪಿಸುವಂತಹ ಸುದ್ದಿಗಳಿಗೆ ಗಮನ ಕೊಡದಂತೆ ಸೂಚಿಸಲಾಗಿದೆ.