Connect with us

LATEST NEWS

ಪುಲ್ವಾಮಾದಲ್ಲಿ ಎನ್ಕೌಂಟರ್ ಗೆ ಒಬ್ಬ ಉಗ್ರ ಬಲಿ

ಜಮ್ಮು-ಕಾಶ್ಮೀರ, ನವೆಂಬರ್ 06: ಕಣಿವೆ ರಾಜ್ಯದಲ್ಲಿ ಉಗ್ರರ ಬೇಟೆ ಮುಂದುವರಿದಿದೆ. ಪುಲ್ವಾಮಾ ಜಿಲ್ಲೆಯ ಪಂಪೋರ್‌ನ ಲಾಲ್‌ಪೋರಾ ಗ್ರಾಮದಲ್ಲಿ ಶುಕ್ರವಾರ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಹೊಡೆದರುಳಿಸಿದ್ದಾರೆ. ಈ ಬಗ್ಗೆ ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ. ಗುರುವಾರ ರಾತ್ರಿ ಉಗ್ರರು ಈ ಪ್ರದೇಶದಲ್ಲಿ ಅಡಗಿರುವ ಮಾಹಿತಿ ಸಿಕ್ಕಿದೆ.

ಹೀಗಾಗಿ ರಾತ್ರಿಯೇ ಕಾರ್ಯಾಚರಣೆಗೆ ತಂಡ ರಚಿಸಿದ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಉಗ್ರರ ಬೇಟೆಗೆ ಮುಂದಾಗಿದ್ದಾರೆ. ಈ ವೇಳೆ ಅಡಗಿ ಕುಳಿತ್ತಿದ್ದ ಉಗ್ರನೊಬ್ಬ ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ್ದಾನೆ. ಇನ್ನು ಉಗ್ರನ ದಾಳಿ ಪ್ರತಿದಾಳಿ ನಡೆಸಿದ ಸೇನೆ ಓರ್ವವನ್ನು ಹೊಡೆದರುಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸದ್ಯ ಇನ್ನೊರ್ವನಿಗಾಗಿ ಹುಡುಕಾಟ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಉಗ್ರರು ಜಮ್ಮು-ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಮೂವರು ಬಿಜೆಪಿ ಮುಖಂಡರನ್ನು ಗುಂಡಿಕ್ಕಿ ಕೊಲ್ಲುವ ಮೂಲಕ ಭಯ ಹುಟ್ಟಿಸಿದ್ದರು. ಹೀಗಾಗಿ ಇತ್ತ ಪೊಲೀಸರು ಹಾಗೂ ಭಾರತೀಯ ಸೇನೆ ಕೂಡ ಉಗ್ರರ ಹುಟ್ಟಡಗಿಸಲು ಪಣ ತೊಟ್ಟಿದೆ. ಯಾವುದೇ ನಾಗರಿಕರ ಪ್ರಾಣಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ಸರ್ಪಗಾವಲು ನಿರ್ಮಿಸಿದೆ.

Facebook Comments

comments