Connect with us

    LATEST NEWS

    ಭಾರತೀಯ ಪ್ರಯಾಣಿಕರಿಗೆ ನಿಷೇಧ ಹೇರಿದ ಚೀನಾ

    ನವದೆಹಲಿ, ನವೆಂಬರ್ 06: ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿರುವ ಚೀನಾ, ಇದೀಗ ಭಾರತೀಯ ಪ್ರಯಾಣಿಕರಿಗೆ ನಿಷೇಧ ಹೇರುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಈ ಮೂಲಕ ಕೊರೊನಾ ನೆಪವೊಡ್ಡಿ ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

    ಚೀನೀ ರಾಯಭಾರ ಕಚೇರಿ ಈ ಕುರಿತು ಸ್ಪಷ್ಟಪಡಿಸಿದ್ದು, ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಚೀನಾದ ಅಧೀಕೃತ ವಿಸಾ ಅಥವಾ ನಿವಾಸ ಪರವಾನಗಿ ಹೊಂದಿದ್ದರು ಸಹ ಕೊರೊನಾ ಕಾರಣದಿಂದಾಗಿ ಭಾರತೀಯರ ಆಗಮನಕ್ಕೆ ನಿಷೇಧ ಹೇರಲಾಗಿದೆ ಎಂದು ಸ್ಪಷ್ಟಪಡಿಸಿದೆ. ಭಾರತದಲ್ಲಿನ ಚೀನೀ ರಾಯಭಾರಿ ಕಚೇರಿ ಅಥವಾ ದೂತಾವಾಸಗಳು ವೀಸಾ ಅಥವಾ ನಿವಾಸ ಪರವಾನಗಿ ಹೊಂದಿದ್ದರು ಸಹ ಭಾರತೀಯರ ಆರೋಗ್ಯ ದಾಖಲಾತಿಗಳಿಗೆ ಸ್ಟ್ಯಾಂಪ್ ಹಾಕಬೇಡಿ ಎಂದು ಸೂಚಿಸಲಾಗಿದೆ.

    ಚೀನಾ ರಾಯಭಾರಿ ಕಚೇರಿಯ ವೆಬ್‍ಸೈಟ್‍ನಲ್ಲಿ ಈ ಕುರಿತು ಪೋಸ್ಟ್ ಮಾಡಲಾಗಿದ್ದು, ಚೀನಾದ ರಾಜತಾಂತ್ರಿಕ, ಸೇವೆ, ಸೌಜನ್ಯ ಹಾಗೂ ಸಿ ದರ್ಜೆಯ ವೀಸಾಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಈ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ತುರ್ತು ಅಥವಾ ಮಾನವೀಯ ಅಗತ್ಯವಿರುವವರು ಭಾರತದಲ್ಲಿನ ಚೀನೀ ರಾಯಭಾರಿ ಕಚೇರಿ ಅಥವಾ ದೂತಾವಾಸಗಳಲ್ಲಿ ವೀಸಾ ಅರ್ಜಿ ಸಲ್ಲಿಸಬಹುದು. ನವೆಂಬರ್ 3ರ ನಂತರ ನೀಡುವ ವೀಸಾಗಳಿಗೆ ನಿಷೇಧ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.

    ಈ ನಿಷೇಧ ತಾತ್ಕಾಲಿಕವಾಗಿದ್ದು, ಕೊರೊನಾ ವೈರಸ್ ಎದುರಿಸಲು ಚೀನಾ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮವಾಗಿದೆ. ಸಾಂಕ್ರಾಮಿಕ ರೋಗವನ್ನು ತಡೆಯಲು ಚೀನಾ ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಂದಾಣಿಕೆ ಹಾಗೂ ಪ್ರಕಟಣೆಗಳನ್ನು ಹೊರಡಿಸಲಿದೆ ಎಂದು ರಾಯಭಾರಿ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply