Connect with us

LATEST NEWS

ಅಗಲಿದ ಕಾಂಗ್ರೇಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಬಿಜೆಪಿಯಿಂದ ನುಡಿನಮನ

ಉಡುಪಿ ಸೆಪ್ಟೆಂಬರ್ 14: ಅಗಲಿದ ಧೀಮಂತ ನಾಯಕ ಕಾಂಗ್ರೇಸ್ ನ ಹಿರಿಯ ಮುಖಂಡ ಆಸ್ಕರ್ ಪೆರ್ನಾಂಡಿಸ್ ಅವರಿಗೆ ಉಡುಪಿ ಜಿಲ್ಲಾ ಬಿಜೆಪಿಯಿಂದ ನುಡಿನಮನ ಸಲ್ಲಿಸಲಾಯಿತು.


ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗಲಿದ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ಭಾವಚಿತ್ರಕ್ಕೆ ಫುಷ್ಪಾರ್ಚನೆ ಮಾಡುವ ಮೂಲಕ ಬಿಜೆಪಿ ಮುಖಂಡರು ತಮ್ಮ ಶೃದ್ದಾಂಜಲಿ ಸಲ್ಲಿಸಿದರು. ರಾಜಕೀಯ ಅಜಾತಶತ್ರು ಆಗಿದ್ದ ಆಸ್ಕರ್ ಫೆರ್ನಾಂಡಿಸ್ ಅವರು ಎಲ್ಲ ಪಕ್ಷಗಳ ನಾಯಕರ ಜೊತೆ ಉತ್ತಮ ಭಾಂಧವ್ಯ ಹೊಂದಿದ್ದರು. ಈ ಹಿನ್ನಲೆಯಲ್ಲಿ ಉಡುಪಿಯಲ್ಲಿ ಬಿಜೆಪಿ ಕಚೇರಿಯಲ್ಲಿ ಶೃದ್ದಾಂಜಲಿ ಸಲ್ಲಿಸಲಾಯಿತು. ಆಸ್ಕರ್ ಫರ್ನಾಂಡಿಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಶಾಸಕ ರಘುಪತಿ ಭಟ್ ತಮ್ಮ ನುಡಿ ನಮನ ಸಲ್ಲಿಸಿದರು.


ನುಡಿನಮನದಲ್ಲಿ ಉಡುಪಿ ಜಿಲ್ಲೆಯ ಬಿಜೆಪಿ ನಾಯಕರು ಭಾಗಿ, ಮಹಿಳಾ ಮೋರ್ಚದ ಅಧ್ಯಕ್ಷ, ಸದಸ್ಯರು ಭಾಗಿಯಾಗಿದ್ದರು. ಈ ಹಿಂದೆ ಡಾ. ವಿಎಸ್ ಆಚಾರ್ಯ ಮೃತಪಟ್ಟಾಗ ಉಡುಪಿ ಕಾಂಗ್ರೆಸ್ ನುಡಿನಮನ ಸಲ್ಲಿಸಿದ್ದರು.