LATEST NEWS
ಜನಪ್ರಿಯ ಆನೆ ಕೇರಳದ ‘ಮಂಗಳಂಕುನ್ನು ಅಯ್ಯಪ್ಪನ್’ ಇನ್ನು ನೆನಪು ಮಾತ್ರ..!

ಕೊಚ್ಚಿನ್ : ಜನಪ್ರಿಯ ಆನೆಗಳಲ್ಲಿ ಒಂದಾದ ಕೇರಳದ ಮಂಗಳಂಕುನ್ನು ಅಯ್ಯಪ್ಪನ್ ಇಹಲೋಕ ತ್ಯಜಿಸಿದೆ. 305 ಸೆಂಟಿ ಮೀಟರ್ ಎತ್ತರದ ಈ ಆನೆ ತನ್ನ ಭವ್ಯವಾದ ನೋಟದಿಂದ ಕೇರಳದ ಭಕ್ತರಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿತ್ತು.
55 ನೇ ವಯಸ್ಸಿನಲ್ಲಿ ನಿಧನವಾದ ಈ ಅನೆ ಎತ್ತರಕ್ಕೆ ಹೆಸರುವಾಸಿಯಾಗಿತ್ತು. ಕಳೆದ ಕೆಲ ಸಮಯದಿಂದ ಅನಾರೋಗ್ಯ ಕಾಡಿದ್ದು ಚಿಕಿತ್ಸೆ ಪಡೆಯುತ್ತಿತ್ತು. ಆದ್ದರಿಂದ ಕಳೆದ ಕೆಲ ಸಮಯದಿಂದ ಅಯ್ಯಪ್ಪನನ್ನು ದೇವಾಲಯದ ಮೆರವಣಿಗೆ, ಇತರ ಕಾರ್ಯಗಳಿಂದ ದೂರ ಇತ್ತು. ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಆನೆ ಮೃತಪಟ್ಟಿದೆ. ಮಂಗಳಮಕುನ್ನು ಅಯ್ಯಪ್ಪನನ್ನು ಎಮ್‌ಎ ಪರಮೇಶ್ವರನ್ ಮತ್ತು ಅವರ ಸಹೋದರ ಎಂಎ ಹರಿದಾಸನ್ ಅವರು ಬಿಹಾರದಲ್ಲಿ 1992 ರಲ್ಲಿ ನಡೆದ ಸೋನ್‌ಪುರ್ ಮೇಳದಲ್ಲಿ ಖರೀದಿಸಿದ್ದರು. ಕೇರಳಕ್ಕೆ ಕರೆತಂದ ಕೆಲವೇ ದಿನಗಳಲ್ಲಿ, ಅಯ್ಯಪ್ಪನ್ ಅಲ್ಲಿನ ಚಟುವಟಿಕೆಗಳಳ್ಲಿ ಪಾಲ್ಗೊಳ್ಳಲಾರಂಭಿಸಿತ್ತು. 305 ಸೆಂಟಿ ಮೀಟರ್ ಎತ್ತರದ ಈ ಆನೆ ತನ್ನ ಭವ್ಯವಾದ ನೋಟದಿಂದ ಕೇರಳದ ಭಕ್ತರಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿತ್ತು.

ತೆಂಕರ ಶಶಿ ಎಂಬ ವ್ಯಕ್ತಿ ಈ ಆನೆ ಸರಿ ಸುಮಾರು 18 ವರ್ಷಗಳ ಕಾಲ ಮಾವುತರಾಗಿ ಕೆಲಸ ಮಾಡಿದ್ದು ಜಂಬೂಸವಾರಿಯಲ್ಲಿ ಅಯ್ಯಪ್ಪನ್ ಪ್ರಮುಖ ಆಕರ್ಷಣೆಯಾಗಿದ್ದ. ತ್ರಿಶೂರ್ ಪೂರಂ ಮತ್ತು ನೆನ್ಮಾರಾ ವಲ್ಲಂಗಿ ವೇಳ ಸೇರಿದಂತೆ ಕೇರಳದ ಪ್ರಮುಖ ದೇವಾಲಯಗಳ ಉತ್ಸವಗಳಲ್ಲಿ ಅಯ್ಯಪನ್ ಉಪಸ್ಥಿತಿ ಇರಲೇ ಬೇಕಾದ ಅನಿವಾರ್ಯತೆಯನ್ನು ಅಯ್ಯಪ್ಪನ್ ನಿರ್ಮಿಸಿದ್ದ. ಜೊತೆಗೆ ಜಂಬೂ, ಆನಚಂದಂ, ಸೇರಿದಂತೆ ಒಂದೆರಡು ಸಿನಿಮಾಗಳಲ್ಲಿ ಅಯ್ಯಪ್ಪನ್ ಕಾಣಿಸಿಕೊಂಡಿದೆ.