Connect with us

LATEST NEWS

ಮಲ್ಪೆ – ಒಂದೇ ಮೀನು ಹರಾಜಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣಕ್ಕೆ ಮಾರಾಟ…!!

ಉಡುಪಿ ನವೆಂಬರ್ 23: ಮಲ್ಪೆ ಬೋಟ್ ಮಾಲೀಕರೊಬ್ಬರಿಗೆ ಲಾಟರಿ ಹೊಡೆದಿದೆ. ಕೆಜಿಗೆ 10ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟವಾಗುವ ಅಪರೂಪದ ಗೋಳಿ ಮೀನು ಬಲೆಗೆ ಬಿದ್ದಿದ್ದು, ಹರಾಜಿನಲ್ಲಿ ಲಕ್ಷ ರೂಪಾಯಿ ಮಾರಾಟವಾಗಿದೆ.


ಉಡುಪಿಯ ಜೈಬಲರಾಮ್ ಎಂಬ ಹೆಸರಿನ ಬೋಟ್‌ನ ಮಾಲೀಕರಿಗೆ ಮಂಗಳವಾರ ದೊಡ್ಡ ಲಾಟರಿಯೇ ಹೊಡೆದಿದೆ. ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಈ ಬೋಟ್‌ಗೆ ಅತ್ಯಂತ ಅಪರೂಪದ ಗೋಲಿ ಫಿಶ್ ಬಲೆಗೆ ಬಿದ್ದಿದೆ. ಔಷಧೀಯ ಉದ್ದೇಶಗಳಿಗೆ ಬಳಕೆಯಾಗುವ ಈ ಮೀನು ಪ್ರತಿ ಕೆ.ಜಿ.ಗೆ ಸುಮಾರು ಹತ್ತು ಸಾವಿರ ರೂಪಾಯಿ ಬೆಲೆ ಬಾಳುತ್ತದೆ.

 

ಬಂದರಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಮೀನು ಒಂದು ಲಕ್ಷ ಮೂವತ್ತು ಸಾವಿರ ರೂಪಾಯಿಗೆ ಹರಾಜಾಗಿದೆ. ಹರಾಜು ನಡೆದಾಗ ಪ್ರತಿ ಕೆಜಿಗೆ 9060ರಂತೆ ಮಾರಾಟವಾಗಿತ್ತು ಒಟ್ಟು 18 ಕೆಜಿ ತೂಕವಿತ್ತು.