Connect with us

    LATEST NEWS

    ಶಾಲೆ ಬಸ್ ಮಿಸ್ ಆಗಿದ್ದಕ್ಕೆ ಮನನೊಂದು ನೇಣಿಗೆ ಶರಣಾದ 9ನೇ ತರಗತಿ ಬಾಲಕ

    ಮಧ್ಯಪ್ರದೇಶ : ಶಾಲೆಯ ಬಸ್ ತಪ್ಪಿ ಹೋಗಿದ್ದಕ್ಕೆ ಮನನೊಂದು 9ನೇ ತರಗತಿ ವಿಧ್ಯಾರ್ಥಿಯೊಬ್ಬ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ ಘಟನೆ ಮಧ್ಯಪ್ರದೇಶದ ಬೆತುಲ್‌ ಜಿಲ್ಲೆಯ ಅಮ್ದೋಹ್‌ ಗ್ರಾಮದಲ್ಲಿ ನಡೆದಿದೆ.


    ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 14 ವರ್ಷದ ಬಾಲಕ ಸೋಮವಾರ ಬೆಳಿಗ್ಗೆ ಶಾಲೆಗೆ ಸಿದ್ಧವಾಗಿ ಮನೆಯಿಂದ ಹೊರಟಿದ್ದ. ಆದರೆ ಶಾಲೆಯ ಬಸ್‌ ತಪ್ಪಿ ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.


    ಶಾಲೆಗೆ ಆತ ತಪ್ಪದೆ ಹೋಗುತ್ತಿದ್ದ. ಬಸ್‌ ಹೊರಟುಹೋಗಿದ್ದ ಕಾರಣ ಬೇಸರಗೊಂಡಿದ್ದ. ಮನೆಗೆ ಅಳುತ್ತಾ ವಾಪಸ್ಸಾಗಿದ್ದ. ನಂತರ ಮನೆಯ ಹಿಂದಿದ್ದ ಮಾವಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಎಂದು ಕುಟುಂಬದ ಸದಸ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply