Connect with us

    LATEST NEWS

    ಕೇವಲ 350 ರೂಪಾಯಿಗೆ ಬರ್ಬರವಾಗಿ ಕೊಲೆ ಮಾಡಿ ಹೆಣದ ಪಕ್ಕ ಡ್ಯಾನ್ಸ್ ಮಾಡಿದ ಅಪ್ರಾಪ್ತ ಬಾಲಕ – ವಿಡಿಯೋ ವೈರಲ್

    ಹೊಸದಿಲ್ಲಿ ನವೆಂಬರ್ 23 : ಕೇವಲ 350 ರೂಪಾಯಿಗೆ ಅಪರಿಚಿತ ಯುವಕನೊಬ್ಬನನ್ನು ಅಪ್ರಾಪ್ತ ಬಾಲಕ ಬರ್ಬರವಾಗಿ ಕೊಲೆ ಮಾಡಿದ ಘಟನೆ ಈಶಾನ್ಯ ದಿಲ್ಲಿಯ ವೆಲ್‌ಕಮ್‌ ಏರಿಯಾದಲ್ಲಿ ನಡೆದಿದೆ.


    ಸದ್ಯ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಲೆಗಾರ ಚಾಕುವಿನಿಂದ ಅಪರಿಚಿತ ವ್ಯಕ್ತಿಗೆ ಅನೇಕ ಬಾರಿ ಇರಿದು ನಂತರ ಅವನನ್ನು ಒಂದು ಮೂಲೆಗೆ ಎಳೆದುಕೊಂಡು ಹೋಗುವುದನ್ನು ವೀಡಿಯೊ ತೋರಿಸುತ್ತದೆ. ನಂತರ ಅವನು ತನ್ನ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿ ಬಳಿಕ ಹೆಣದ ಪಕ್ಕದಲ್ಲೇ ಡ್ಯಾನ್ಸ್ ಮಾಡಿದ್ದಾನೆ.

    ಬಲಿಯಾದವರನ್ನು ಯೂಸುಫ್ (17) ಎಂದು ಗುರುತಿಸಲಾಗಿದ್ದು, ಜಫರಾಬಾದ್ ಪ್ರದೇಶದ ನಿವಾಸಿ. ಮಧ್ಯಾಹ್ನ ಹಾಲು ಖರೀದಿಸಲು ಹೋಗಿದ್ದ ಈತನನ್ನು 16 ವರ್ಷದ ಅಪ್ರಾಪ್ತ ಬಾಲಕ ಚಾಕುವಿನಿಂದ ಇರಿದು ಹತ್ಯೆಗೈದಿದ ಎಂದು ತಿಳಿದು ಬಂದಿದೆ. ಕೊಲೆಯ ಹಿಂದಿನ ಕಾರಣ ದರೋಡೆ ಎಂದು ತಿಳಿದು ಬಂದಿದ್ದು, ಕೊಲೆಯಾದವನ ಬಳಿ ಇದ್ದ ಕೇವಲ 350 ರೂಪಾಯಿಗೆ ಕೊಲೆಗಾರ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply