Connect with us

LATEST NEWS

ಅತ್ತೆಯ ಸಮಾಧಾನಕ್ಕಾಗಿ ಸೊಸೆಯ ಹೆಣ ನೇಣಿಗೆ ಹಾಕಿದ ಅಧಿಕಾರಿಗಳು!

ಟೆಹ್ರಾನ್, ಫೆಬ್ರವರಿ 25: ಅತ್ತೆಯ ಸಮಾಧಾನಕ್ಕೆ ಸೊಸೆಯ ಹೆಣವನ್ನೇ ನೇಣಿಗೆ ಏರಿಸಿರುವ ಘಟನೆ ಇರಾನ್​ನಲ್ಲಿ ನಡೆದಿದೆ. ನೇಣು ಶಿಕ್ಷೆಗೆ ಗುರಿಯಾಗಿದ್ದ ಸೊಸೆಗೆ ಶಿಕ್ಷೆಗೆ ಕೆಲವು ಗಂಟೆ ಮುಂಚೆಯೇ ಹೃದಯಾಘಾತವಾಗಿದ್ದರಿಂದಾಗಿ ಈ ಘಟನೆ ನಡೆದಿರುವುದಾಗಿ ತಿಳಿಸಲಾಗಿದೆ.

ಜಹ್ರಾ ಇಸ್ಮಾಯಿಲಿ ಹೆಸರಿನ ಮಹಿಳೆಯೊಂದಿಗೆ ಆಕೆಯ ಗಂಡ ಅಸಭ್ಯವಾಗಿ ವರ್ತನೆ ಮಾಡಿದ್ದನಂತೆ. ಅದೇ ಸಿಟ್ಟಿನಿಂದ ಆಕೆ ಗಂಡನನ್ನೇ ಕೊಲೆ ಮಾಡಿದ್ದಾಳೆ. ಆಕೆಗೆ ಇರಾನ್​ನ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಮಗನನ್ನು ಕೊಂದ ಸೊಸೆ ನೇಣಿಗೆ ಏರುವುದನ್ನು ತಾನು ನೋಡಬೇಕೆಂದು ಅತ್ತೆ ಕಾಯಲಾರಂಭಿಸಿದ್ದಳು.

ಸೊಸೆಯನ್ನು ನೇಣಿಗೆ ಹಾಕುವ ದಿನವೂ ಬಂದಿತ್ತು. ಆದರೆ ಅದೇ ದಿನ ಅಪರಾಧಿ ಮಹಿಳೆಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾಳೆ. ಆದರೆ ಆಕೆಯ ನೇಣು ಶಿಕ್ಷೆಗಾಗಿ ಕಾಯುತ್ತಿದ್ದ ಅತ್ತೆಗಾಗಿ ಜೈಲಿನ ಅಧಿಕಾರಿಗಳು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಹೃದಯಾಘಾತದಿಂದ ಸತ್ತಿದ್ದ ಅಪರಾಧಿ ಮಹಿಳೆಯ ದೇಹವನ್ನೇ ಮತ್ತೊಮ್ಮೆ ನೇಣಿಗೆ ಹಾಕಿದ್ದಾರೆ, ಅತ್ತೆ ನಿಟ್ಟುಸಿರು ಬಿಟ್ಟಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *