LATEST NEWS
ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಮತ್ತೆ ಕಾಂಡೋಮ್ ಪತ್ತೆ..ಮುಂದುವರೆದ ವಿಕೃತಿ
ಮಂಗಳೂರು ಫೆಬ್ರವರಿ 25: ನಗರದಲ್ಲಿ ಮತ್ತೆ ದೈವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ವಿಕೃತಿ ಮರೆಯುವ ಘಟನೆ ಮಂದುವರೆದಿದ್ದು, ಮಂಗಳೂರು ನಗರದ ದಡ್ಡಲ್ ಕಾಡ್ ಬಳಿ ಇರುವ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಕಾಂಡೊಮ್ ಹಾಗೂ ಅವಹೇಳನಕಾರಿ ಬರಹದ ಪತ್ರ ಪತ್ತೆಯಾಗಿದೆ.
ಉರ್ವದ ದಡ್ಡಲ್ ಕಾಡ್ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಯನ್ನು ಇಂದು ತೆರೆದ ಸಂದರ್ಭದಲ್ಲಿ ಅದರಲ್ಲಿ ಅವಹೇಳನಕಾರಿ ಬರಹ ಮತ್ತು ಕಾಂಡೋಮ್ ಪತ್ತೆಯಾಗಿದೆ. ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಬರಹ ಮತ್ತು ಕಾಂಡೋಮ್ ಗಳನ್ನು ಕಾಣಿಕೆ ಹುಂಡಿಯಲ್ಲಿ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಉರ್ವ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ.
You must be logged in to post a comment Login