FILM
ಓ ನಲ್ಲಾ ಏನಿಲ್ಲಾ..ಕರಿಮಣಿ ಮಾಲೀಕ ನೀನಲ್ಲಾ – ಹಾಡಿನ ಟ್ರೆಂಡ್ ಸೃಷ್ಠಿಸಿದ ಉತ್ತರ ಕರ್ನಾಟಕದ ಕನಕ
ಮಂಗಳೂರು ಫೆಬ್ರವರಿ 09: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನದೇ ಟ್ರೆಂಡ್…ನೆಟ್ಟಿಗರು ಓ ನಲ್ಲಾ ಏನಿಲ್ಲಾ..ಕರಿಮಣಿ ಮಾಲೀಕ ನೀನಲ್ಲಾ ಹಾಡಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ನಡುವೆ ಇದ್ದಕ್ಕಿದ್ದ ಹಾಗೆ ಈ ಹಾಡು ಟ್ರೆಂಡ್ ಆಗಲು ಕಾರಣ ಉತ್ತರ ಕರ್ನಾಟಕದ ಕನಕ ಎಂಬ ಯುವಕ.
ಏನಿಲ್ಲಾ… ಏನಿಲ್ಲಾ….’ ಇಷ್ಟು ಹಾಡಿಬಿಟ್ರೆ ಸಾಕು ಮುಂದಿನ ಹಾಡು ತಾನಾಗಿಯೇ ಬಾಯಲ್ಲಿ ‘ಕರಿಮಣಿ ಮಾಲೀಕ ನೀನಲ್ಲಾ…’ ಅಂತ ಬಂದು ಬಿಡುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಕರಿಮಣಿ ಮಾಲೀಕ ನೀನಲ್ಲಾ ಸಾಂಗ್ ಇವತ್ತಿಗೆ ಸಾಕಷ್ಟು ಟ್ರೆಂಡ್ ಆಗಿದೆ. ಯಾರ ಬಾಯಲ್ಲೇ ಕೇಳಲಿ ‘ಏನಿಲ್ಲಾ… ಏನಿಲ್ಲಾ….’ ಇಂದೊಂದೇ ಹಾಡು ಗುನುಗುಟ್ಟಲು ಆರಂಭವಾಗಿದೆ. ಸ್ಯಾಂಡಲ್ವುಡ್ನ ನಟ ಉಪ್ಪಿ ಉಪೇಂದ್ರ ಹಾಗೂ ನಟಿ ಪ್ರೇಮಾ ಅಭಿನಯದ ಸೂಪರ್ ಹಿಟ್ ಸಾಂಗ್ ಇದು. 1999ರಲ್ಲಿ ತೆರೆ ಕಂಡ ‘ಉಪೇಂದ್ರ’ ಸಿನಿಮಾದ ಈ ಹಾಡು 25 ವರ್ಷಗಳ ನಂತರ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಲು ಶುರುವಾಗಿದೆ.
ಈ ಹಾಡು ಇದ್ದಕ್ಕಿದ್ದ ಹಾಗೆ ಯಾಕೆ ಟ್ರೆಂಡ್ ಆಯ್ತು ಅಂದ್ರೆ ಉತ್ತರ ಕರ್ನಾಟಕದ ಕನಕ ಎಂಬ ಯುವಕನಿಂದ 25 ವರ್ಷ ಹಳೆಯ ಈ ಹಾಡು ಹವಾ ಸೃಷ್ಟಿಸಿದೆ. ಈ ಯುವಕ ತನ್ನದೇ ಆದ ಶೈಲಿನಲ್ಲಿ ”ಓ ನಲ್ಲ, ನೀ ನಲ್ಲ, ಕರಿಮಣಿ ಮಾಲೀಕ ನೀನಲ್ಲ.. ಕರಿಮಣಿ ಮಾಲೀಕ ನೀ ನಲ್ಲ..’ ಎಂಬ ಸಾಲುಗಳನ್ನು ಬಳಸಿ, ರೀಲ್ ಮಾಡಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯ್ತು. ಬಳಿಕ ಇದು ಟಪ್ಪಾಂಗುಚ್ಚಿ ವರ್ಷನ್ಗೆ ಬದಲಾಯ್ತು. ಈಗ ಇದು ಭಾರೀ ಸದ್ದು ಮಾಡುತ್ತಿದೆ.