FILM
ಯುದ್ದ ಪೀಡಿತ ಇಸ್ರೇಲ್ ನಿಂದ ಸುರಕ್ಷಿತವಾಗಿ ಭಾರತಕ್ಕೆ ಬಂದ ಬಾಲಿವುಡ್ ನಟಿ ನುಶ್ರತ್ ಭರುಚಾ

ಮುಂಬೈ ಅಕ್ಟೋಬರ್ 08: ಇಸ್ರೇಲ್ ಗೆ ಹೈಫಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ತೆರಳಿದ್ದ ಬಾಲಿವುಡ್ ನಟಿ ನುಶ್ರತ್ ಭರುಚಾ ಸುರಕ್ಷಿತವಾಗಿ ಮುಂಬೈಗೆ ಮರಳಿದ್ದಾರೆ.
ಹಮಾಸ್ ಉಗ್ರರ ದಾಳಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಇಸ್ರೇಲ್ ನಲ್ಲಿ ಸಿಲುಕಿದ್ದ ಬಾಲಿವುಡ್ ನಟಿ ನುಶ್ರತ್ ಭರುಚಾ ಅವರ ಸಂಬಂಧಿಕರಿಂದ ಸಂಪರ್ಕ ಕಳೆದುಕೊಂಡಿದ್ದರು. ನಂತರ ಸಂಪರ್ಕಕ್ಕೆ ಸಿಲುಕಿದ್ದ ಅವರು ನಾನು ಸೇಫ್ ಆಗಿ ಇದ್ದೇನೆ ಎಂದು ತಿಳಿಸಿದ್ದರು.

ಬಳಿಕ ರಾಯಭಾರ ಕಚೇರಿಯ ನೆರವಿನೊಂದಿಗೆ, ನುಶ್ರತ್ ಈಗ ಸುರಕ್ಷಿತವಾಗಿ ಅಬುಧಾಬಿ ಮೂಲಕ ಸಂಪರ್ಕ ವಿಮಾನದ ಮೂಲಕ ಭಾರತಕ್ಕೆ ಮರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ನುಶ್ರುತ್ ಭರುಚಾ ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದರು, ಸದ್ಯ ನನ್ನ ಆರೋಗ್ಯ ಸರಿಯಿಲ್ಲ. ನಂತರ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.