Connect with us

    LATEST NEWS

    ಹಮಾಸ್ ಉಗ್ರರ ದಾಳಿಗೆ ಬಲಿಯಾದ 600ಕ್ಕೂ ಅಧಿಕ ಇಸ್ರೇಲಿಯನ್ನರು…!!

    ಇಸ್ರೇಲ್ ಅಕ್ಟೋಬರ್ 08 : ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನ ಉಗ್ರಗಾಮಿ ಗುಂಪು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವು ಅತ್ಯಂತ ವಿನಾಶಕಾರಿ ತಿರುವು ಪಡೆಯುತ್ತಿದ್ದು, ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಹಠಾತ್ ದಾಳಿಯಲ್ಲಿ ಕನಿಷ್ಠ 600ಕ್ಕೂ ಅಧಿಕ ಇಸ್ರೇಲಿನ ಪ್ರಜೆಗಳು ಸಾವನಪ್ಪಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

    ಇಸ್ರೇಲ್ ಮತ್ತು ಪ್ಯಾಲೆಸ್ಟಿನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ ರಾಕೆಟ್ ದಾಳಿ ನಡೆಸಿದ ನಂತರ ಅಧಿಕೃತವಾಗಿ ಯುದ್ಧ ಆರಂಭವಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು “ದೀರ್ಘ ಮತ್ತು ಕಷ್ಟಕರವಾದ ಯುದ್ಧವನ್ನು ಪ್ರಾರಂಭಿಸುತ್ತಿದ್ದೇವೆ” ಎಂದು ಘೋಷಿಸುವ ಮೂಲಕ, ಇಸ್ರೇಲ್ ಮತ್ತಷ್ಟು ಆಕ್ರಮಣಕಾರಿಯಾಗಿ ದಾಳಿ ಮಾಡಲು ಆರಂಭಿಸಿದೆ.

    ಹಮಾಸ ಗುಂಪು ಬೃಹತ್ ರಾಕೆಟ್ ದಾಳಿ ಮಾಡಿದ್ದಲ್ಲದೆ, ನೆಲ ಮತ್ತು ಸಮುದ್ರದ ಮಾರ್ಗವಾಗಿ ಕೂಡ ಇಸ್ರೇಲ್ ಮೇಲೆ ಆಕ್ರಮಣ ಮಾಡುತ್ತಿದೆ. ಮೂಲಗಳ ಪ್ರಕಾರ ಈವರೆಗೆ ಹಮಾಸ್ ಉಗ್ರರ ದಾಳಿಯಿಂದ 600 ಇಸ್ರೇಲಿ ಪ್ರಜೆಗಳು ಸಾವನ್ನಪ್ಪಿದ್ದು 1000 ಮಂದಿ ಗಾಯಗೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply