Connect with us

  KARNATAKA

  ಗಮನಿಸಿ : ಯಶವಂತಪುರ-ಕಾರಟಗಿ ರೈಲಿನ 30 ದಿನಗಳ ಕಾಲ ಮಾರ್ಗ ಬದಲಾವಣೆ

  ಹುಬ್ಬಳ್ಳಿ : ಅಮೃತ ಭಾರತ ನಿಲ್ದಾಣ ಯೋಜನೆಯಡಿ ಬಳ್ಳಾರಿ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಸಲುವಾಗಿ ಪ್ಲಾಟ್ ಫಾರ್ಮ್ -3ರಲ್ಲಿನ ಕಾಮಗಾರಿಯಿಂದ ಪ್ರಯಾಣಿಕರಿಗೆ ಅವಕಾಶ ನಿರ್ಬಂಧಿಸಿದ ಪರಿಣಾಮ ರೈಲುಗಳ ಸಂಖ್ಯೆ 16545/16546 ಯಶವಂತಪುರ ಮತ್ತು ಕಾರಟಗಿ ನಿಲ್ದಾಣಗಳ ಮಧ್ಯ ಸಂಚರಿಸುತ್ತಿರುವ ಡೈಲಿ ಎಕ್ಸ್ ಪ್ರೆಸ್ ರೈಲುಗಳನ್ನು 30 ದಿನಗಳ ಕಾಲ ಮಾರ್ಗ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.

   

  ಅದರ ಮಾಹಿತಿ ಈ ಕೆಳಗಿನಂತಿವೆ.

  1. ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 23 ರವರೆಗೆ ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಡೈಲಿ ಎಕ್ಸ್‌ಪ್ರೆಸ್ ರೈಲು ಓಬಳಾಪುರಂ, ಬಳ್ಳಾರಿ ಬೈಪಾಸ್ ಕ್ಯಾಬಿನ್, ಬಳ್ಳಾರಿ ಕಂಟೋನ್ಮೆಂಟ್ ಮತ್ತು ಕುಡತಿನಿ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಬಳ್ಳಾರಿ ಜಂಕ್ಷನಲ್ಲಿ ನಿಲುಗಡೆ ಇರುವುದಿಲ್ಲ.

  2. ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 24 ರವರೆಗೆ ಕಾರಟಗಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16546 ಕಾರಟಗಿ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲು ಕುಡತಿನಿ, ಬಳ್ಳಾರಿ ಕಂಟೋನ್ಮೆಂಟ್, ಬಳ್ಳಾರಿ ಬೈಪಾಸ್ ಕ್ಯಾಬಿನ್ ಮತ್ತು ಓಬಳಾಪುರಂ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಬಳ್ಳಾರಿ ಜಂಕ್ಷನಲ್ಲಿ ನಿಲುಗಡೆ ಇರುವುದಿಲ್ಲ.

  ಈ ರೈಲುಗಳಲ್ಲಿ ಪ್ರಯಾಣಿಸುವ (16545/46) ಪ್ರಯಾಣಿಕರ ಅನುಕೂಲಕ್ಕಾಗಿ ಬಳ್ಳಾರಿ ಕಂಟೋನ್ಮೆಂಟ್ ನಿಲ್ದಾಣದಲ್ಲಿ 5 ನಿಮಿಷಗಳ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply