Connect with us

FILM

ಮನೆಯಲ್ಲಿ ಜಾರಿ ಬಿದ್ದು ಸಾವನಪ್ಪಿದ ನಟ ಅಖಿಲ್ ಮಿಶ್ರಾ

ಮುಂಬೈ ಸೆಪ್ಟೆಂಬರ್ 21: ಅಮಿರ್ ಖಾನ್ ನಟನೆಯ ತ್ರೀ ಇಡಿಯಟ್ಸ್ ನಲ್ಲಿ ನಟಿಸಿದ್ದ ನಟ ಅಖಿಲ್ ಮಿಶ್ರಾ ಮನೆಯಲ್ಲಿ ಜಾರಿ ಬಿದ್ದು ಸಾವನಪ್ಪಿದ್ದಾರೆ.

ಅಮಿರ್ ಖಾನ್  ನಟನೆಯ ‘3 ಇಡಿಯಟ್ಸ್’, ‘ದಿಲ್ ಚಾಹ್ತಾ ಹೈ’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ಅಖಿಲ್ ಮಿಶ್ರ ನಟಿಸಿದ್ದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಸೆಪ್ಟೆಂಬರ್ 19ರಂದು ತಮ್ಮ ನಿವಾಸದಲ್ಲಿ ಅಡುಗೆ ಮನೆಯಲ್ಲಿ ಟೇಬಲ್ ಹತ್ತಿ ಏನೋ ಕೆಲಸ ಮಾಡುವಾಗ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು. ತೀವ್ರ ರಕ್ತಸ್ರಾವದಿಂದ ಅಖಿಲ್ ನಿಧನ ಹೊಂದಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.


ಅಖಿಲ್ ಗೆಳೆಯರೊಬ್ಬರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಂತೆ, ಅಖಿಲ್, ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿ ನೆರೆ-ಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದರು, ಚಿಕಿತ್ಸೆಗೆ ಸ್ಪಂದಿಸದೇ ಅಖಿಲ್ ಮೃತಪಟ್ಟರು ಎಂದಿದ್ದಾರೆ. ಅಖಿಲ್, ಟೇಬಲ್ ನಿಂದ ಬಿದ್ದ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲವಂತೆ, ಪತ್ನಿ ಸಹ ದೂರದ ಹೈದರಾಬಾದ್​ನಲ್ಲಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಅಖಿಲ್​ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರ ಆಪ್ತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply