Connect with us

    LATEST NEWS

    ಡಿಸೆಂಬರ್ 14 ರಿಂದ ಬೆಂಗಳೂರು ಮತ್ತು ಮಂಗಳೂರು ನಡುವಿನ ಎಲ್ಲಾ ರೈಲುಗಳನ್ನು ರದ್ದು

    ಮಂಗಳೂರು ಡಿಸೆಂಬರ್ 12: ಡಿಸೆಂಬರ್ 14 ರಿಂದ ಡಿಸೆಂಬರ್ 22 ರವರೆಗೆ ಮಂಗಳೂರು ಬೆಂಗಳೂರು ನಡುವಿನ ಎಲ್ಲಾ ರೈಲು ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಿನ್ಸಿಪಲ್ ಚೀಫ್ ಮ್ಯಾನೇಜರ್ (ಕಾರ್ಯಾಚರಣೆ) ಅವರು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.


    ನೈಋತ್ಯ ರೈಲ್ವೆಯು ಹಾಸನದ ಹಾಸನ ಜಂಕ್ಷನ್ ರೈಲು ನಿಲ್ದಾಣದಲ್ಲಿ ಯಾರ್ಡ್ ನಲ್ಲಿ ವಿವಿಧ ಕಾಮಗಾರಿಗಳ ಹಿನ್ನಲೆ ಡಿಸೆಂಬರ್ 14 ರಿಂದ ಡಿಸೆಂಬರ್ 22 ರವರೆಗೆ ವಿವಿಧ ದಿನಾಂಕಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ನಡುವಿನ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಿದೆ ಎಂದು ತಿಳಿಸಿದೆ.

     

    ರೈಲು ಸಂಖ್ಯೆ 16511 ಬೆಂಗಳೂರು- ಮಂಗಳೂರು- ಕಣ್ಣೂರು ಮತ್ತು ರೈಲು ಸಂಖ್ಯೆ 16595 ಬೆಂಗಳೂರು- ಕಾರವಾರ ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ಡಿಸೆಂಬರ್ 16 ರಿಂದ ಡಿಸೆಂಬರ್ 20 ತನಕ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 16512 ಕಣ್ಣೂರು- ಮಂಗಳೂರು- ಬೆಂಗಳೂರು ಮತ್ತು ರೈಲು ಸಂಖ್ಯೆ 16596 ಕಾರವಾರ – ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್‌ನ್ನು ಡಿಸೆಂಬರ್ 17 ರಿಂದ ಡಿಸೆಂಬರ್ 21 ತನಕ ರದ್ದುಗೊಳಿಸಲಾಗಿದೆ. ವಾರದಲ್ಲಿ ಮೂರು ದಿನ ಸಂಚರಿಸುವ ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್‌ನ್ನು ಡಿಸೆಂಬರ್ 14, 17, 19 ಮತ್ತು 21 ರಂದು ರದ್ದುಗೊಳಿಸಲಾಗಿದೆ.

    ಮಂಗಳೂರು ಜಂಕ್ಷನ್- ಯಶವಂತಪುರ ಗೋಮಟೇಶ್ವರ ಎಕ್ಸ್‌ಪ್ರೆಸ್ 16576ನ್ನು ಡಿಸೆಂಬರ್ 15, 18, 20 ಮತ್ತು 22 ರಂದು ರದ್ದುಗೊಳಿಸಲಾಗಿದೆ. ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್ ನಂಬರ್ 16515 ಪ್ರಯಾಣವನ್ನು ಡಿಸೆಂಬರ್ 13, 15,18,20 ಮತ್ತು 22 ರಂದು ರದ್ದುಪಡಿಸಲಾಗಿದೆ.

    ವಾರದಲ್ಲಿ ಮೂರು ದಿನ ಸಂಚರಿಸುವ ಕಾರವಾರ- ಯಶವಂತಪುರ ನಂಬರ್ 16516 ನಂಬರ್ ರೈಲು ಸೇವೆಯನ್ನು ಡಿಸೆಂಬರ್ 14, 16, 19, 21 ಮತ್ತು 23 ರಂದು ರದ್ದುಗೊಳಿಸಲಾಗಿದೆ. ಡಿಸೆಂಬರ್ 16 ಮತ್ತು 17 ರಂದು ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ರೈಲ್(16539/ 16540) ಓಡಾಟವನ್ನು ಕ್ರಮವಾಗಿ ರದ್ದುಪಡಿಸಲಾಗಿದೆ. ಲಭ್ಯ ರೈಲು ಮಾರ್ಗ ಈ ಅವಧಿಯಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು- ಮುರ್ಡೇಶ್ವರ-ಬೆಂಗಳೂರು (ರೈಲು ಸಂಖ್ಯೆ. 16585/ 586 ) ರಾಜಧಾನಿಯನ್ನು ಕರಾವಳಿಯೊಂದಿಗೆ ಸಂಪರ್ಕಿಸುವ ಏಕೈಕ ರೈಲು ಆಗಿರುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply