LATEST NEWS
ಸಿಎಎ ಪರ ಸಮಾವೇಶದಲ್ಲಿ ರಾಷ್ಟ್ರಧ್ವಜ ಹಿಡಿಬೇಡಿ ಎಂದು ಆದೇಶ ಬಂದಿತ್ತಾ…ಖಾದರ್ ಪ್ರಶ್ನೆ

ಸಿಎಎ ಪರ ಸಮಾವೇಶದಲ್ಲಿ ರಾಷ್ಟ್ರಧ್ವಜ ಹಿಡಿಬೇಡಿ ಎಂದು ಆದೇಶ ಬಂದಿತ್ತಾ…ಖಾದರ್ ಪ್ರಶ್ನೆ
ಮಂಗಳೂರು ಜನವರಿ 28:ಬಿಜೆಪಿ ನಿನ್ನೆ ನಡೆಸಿದ ಸಿಎಎ ಪರ ಜನಜಾಗೃತಿ ಸಮಾವೇಶದಲ್ಲಿ ರಾಷ್ಟ್ರ ಧ್ವಜ ಹಿಡಿಬೇಡಿ ಎಂದು ಯಾರಾದರೂ ಆದೇಶ ಮಾಡಿದ್ದಾರಾ? ಎಂದು ಮಾಜಿ ಸಚಿವ ಯು.ಟಿ ಖಾದರ್ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ನಿನ್ನೆ ನಡೆದ ಸಮಾವೇಶ ದೊಡ್ಡ ಮಟ್ಟದ ಯಶಸ್ವಿಯಾಗಲಿಲ್ಲ, ಸಭೆಯನ್ನು ವಿಫಲಗೊಳಿಸಿದ್ದಕ್ಕೆ ಜಿಲ್ಲೆಯ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಸಮಾವೇಶದಲ್ಲಿ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಭಯ ಪಡಬೇಡಿ ಅಂತ ಹೇಳುವ ಪರಿಸ್ಥಿತಿ ಬಂದಿದ್ದೇಕೆ? ಯಾವುದೇ ಕಾನೂನಿಂದ ಜನರನ್ನು ಭಯಪಡಿಸಬೇಡಿ. ಎನ್‍ಆರ್‍ಸಿ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇನ್ನೂ ಸ್ಪಷ್ಟತೆ ಕೊಟ್ಟಿಲ್ಲ.

ರಾಜನಾಥ್ ಸಿಂಗ್ ಎನ್‍ಆರ್‍ಸಿ ಜಾರಿಯ ಪ್ರಸ್ತಾಪ ಇಲ್ಲ ಅಂತಾರೆ. ಪಾರ್ಲಿಮೆಂಟ್‍ನಲ್ಲಿ ಅಮಿತ್ ಷಾ ಎನ್‍ಆರ್‍ಸಿ ಜಾರಿ ಮಾಡ್ತೀವಿ ಅಂತಾರೆ. ಪ್ರಧಾನಿ ಮೋದಿ ಎನ್‍ಆರ್‍ಸಿಯ ಬಗ್ಗೆ ಚರ್ಚೆಯೇ ಮಾಡಿಲ್ಲ ಅಂತಾರೆ. ದೇಶದ ಜನ ಎನ್‍ಆರ್‍ಸಿ ಬಗ್ಗೆ ಗೊಂದಲದಲ್ಲಿದ್ದಾರೆ. ಕೇಂದ್ರ ಸರ್ಕಾರವೇ ಜನರಿಗೆ ಸ್ಪಷ್ಟ ನಿಲುವು ಹೇಳಬೇಕು. ಮೈದಾನದಲ್ಲಿ ಜನ ಸೇರಿಸಿದ್ರೆ ತಪ್ಪುಗಳೆಲ್ಲಾ ಸರಿಯಾಗಲ್ಲ. ಸಂವಿಧಾನ ವಿರೋಧಿ ಕಾನೂನು ದೇಶದಲ್ಲಿ ಊರ್ಜಿತವಾಗೋದಿಲ್ಲ ಅಂತ ಯುಟಿ ಖಾದರ್ ಹೇಳಿದರು.