ವಿದ್ಯುತ್ ಬಿಲ್ ಪಾವತಿಸದೆ ವಂಚಿಸಿದ ಕಾಂಗ್ರೇಸ್ ಮುಖಂಡನಿಂದ ಲೈನ್ ಮ್ಯಾನ್ ಗೆ ಹಲ್ಲೆ

ಮಂಗಳೂರು ಜನವರಿ 28: ಬಾಕಿ ಉಳಿಸಿಕೊಂಡ ವಿದ್ಯುತ್ ಬಿಲ್ ಮರುಪಾವತಿಸುವಂತೆ ಮನೆಗೆ ವಿನಂತಿಸಲು ಹೋದ ಲೈನ್ ಮ್ಯಾನ್ ಮೇಲೆ ಕಾಂಗ್ರೇಸ್ ಮುಖಂಡನೋರ್ವ ಹಲ್ಲೆ ನಡೆಸಿದ ಘಟನೆ ನಡೆದಿದೆ. ಉಳ್ಳಾಲ ಪೋಲೀಸ್ ಠಾಣಾ ವ್ಯಾಪ್ತಿಯ ನಾಟೇಕಲ್ ನ ಜಲಾಲಾಬಾದ್ ಎಂಬಲ್ಲಿನ ನಿವಾಸಿ ಅಮೀರ್ ಹುಸೇನ್ ತುಂಬೆ ಹಲ್ಲೆ ನಡೆಸಿದ ಕಾಂಗ್ರೇಸ್ ಮುಖಂಡನಾಗಿದ್ದಾನೆ.

ಸಾವಿರಾರು ರೂಪಾಯಿಗಳ ಬಿಲ್ ಬಾಕಿ ಉಳಿಸಿಕೊಂಡು ಮೆಸ್ಕಾಂ ಇಲಾಖೆಗೆ ವಂಚನೆ ಮಾಡುತ್ತಿದ್ದ ಈತನ ಮನೆಗೆ ಮೆಸ್ಕಾಂ ಸಿಬ್ಬಂದಿಗಳು ಹಲವು ಬಾರಿ ಹೋಗಿ ಬಿಲ್ ಪಾವತಿಸುವಂತೆ ಮನವಿ ಮಾಡಿದ್ದರೂ ಈತ ತನ್ನ ರಾಜಕೀಯ ಬಳಸಿಕೊಂಡು ಬಿಲ್ ಪಾವತಿಸದೆ ವಂಚನೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.

ಇಂದು ಮೆಸ್ಕಾಂ ಲೈನ್ ಮ್ಯಾನ್ ಮಧು ಹಾಗೂ ಇನ್ನೋರ್ವ ಮೆಸ್ಕಾಂ ಸಿಬ್ಬಂದಿ ಮೇಲೆ ಅಮೀರ್ ಹಸನ್ ತುಂಬೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಮುಸ್ಲಿಂ ಮನೆಗೆ ಬರುವ ಧೈರ್ಯ ನಿನಗೆ ಹೇಗೆ ಬಂತು ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾನೆ.

ಕಾಂಗ್ರೇಸ್ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷನೂ ಆಗಿರುವ ಈತ ಬಿಲ್ ಪಾವತಿಸದೆ ವಂಚನೆ ಮಾಡಿರುವದಲ್ಲದೆ, ಬಿಲ್ ಪಾವತಿಸುವಂತೆ ಮನವಿ ಮಾಡಲು ಬಂದ ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಸಿ ರೌಡಿಸಂ ಪ್ರದರ್ಶಿಸಿದ್ದಾನೆ. ಈತನ ವಿರುದ್ಧ ಉಳ್ಳಾಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments