ಬೆದರಿಕೆ ಹಾಕುವಾಗ ಆಲೋಚನೆ ಮಾಡಿ ನಿಮ್ಮ ಹತ್ತಿರ ಲಾಯರ್ ಗೆ ಕೊಡಲು ಕೂಡ ಹಣ ಇರಲ್ಲ – ಖಾದರ್

ಮಂಗಳೂರು ಜನವರಿ 28: ನನ್ನ ಒಬ್ಬನ ತಲೆಯಿಂದ ಸಿಎಎ ಹೋರಾಟ ತಣ್ಣಗೆ ಆಗೋದಿಲ್ಲ. ನನ್ನ ತಲೆ ಕಡಿಯೋದ್ರಿಂದ ನಿಮಗೆ ಸಂತೋಷವಾಗುತ್ತಾ..? ಹಾಗಾದ್ರೆ ಎಲ್ಲಿ ಕರೀತೀರಿ ಅಲ್ಲಿಗೆ ನಾನು ಬರ್ತೇನೆ ಎಂದು ಶಾಸಕ ಯು.ಟಿ ಖಾದರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿನ್ನೆ ನಡೆದ ಸಿಎಎ ಜನಜಾಗೃತಿ ಸಮಾವೇಶದಲ್ಲಿ ಖಾದರ್ ಅವರಿಗೆ ಜೀವ ಬೆದರಿಕೆ ಘೋಷಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು ನನ್ನ ತಲೆ ತೆಗೆಯೋದಾದರೆ ಹೇಳಿ ಅಲ್ಲಿಗೆ ಬರುತ್ತೇನೆ, ಸಮಾಧಾನದಿಂದ ತಲೆ ತೆಗೀರಿ ಎಂದರು. ಆದರೆ ಅದಕ್ಕೂ ಮೊದಲು ನಿಮ್ಮ ಮನೆಯವರ ಪರಿಸ್ಥಿತಿ ಬಗ್ಗೆ ಆಲೋಚನೆ ಮಾಡಿ. ನಿಮ್ಮನ್ನ ಜೈಲಿಗೆ ಕಳುಹಿಸೋದು ಕಷ್ಟದ ವಿಷಯ ಇಲ್ಲ. ಮನೆಯಲ್ಲಿ ಲಾಯರ್‍ಗೆ ಕೊಡೋಕೆ ಹಣವೂ ಇರೋದಿಲ್ಲ ಹಾಗಾಗಿ ಘೋಷಣೆ ಕೂಗುವಾಗ ಆಲೋಚನೆ ಮಾಡಿ ಅಂತ ಖಡಕ್ಕಾಗಿ ಉತ್ತರಿಸಿದ್ದಾರೆ.

ಸಿಎಎ ಪರ ಇರುವ ಕಾರ್ಯಕರ್ತರಿಗೆ ಎನ್ ಆರ್ ಸಿ ನೈಜ ವಿಷಯ ಗೊತ್ತಾಗಲಿ. ದಾಖಲೆ ಹಿಡಿದು ಕ್ಯೂ ನಿಲ್ಲುವ ಪರಿಸ್ಥಿತಿ ಬರಲಿ. ಆಗ ನಾಯಕರ ವಿರುದ್ಧ ಕಾರ್ಯಕರ್ತರೇ ಘೋಷಣೆ ಕೂಗ್ತಾರೆ. ನಾವು ಸಮಾಜ ಒಡೆಯುವ ಕೆಲಸ ಮಾಡೋದಿಲ್ಲ. ಘೋಷಣೆ ಕೂಗಿದವರ ಬಗ್ಗೆ ಕನಿಕರ ಇದೆ. ಅವರನ್ನು ಕೇಸ್ ಹಾಕಿ ಜೈಲಿಗೆ ಕಳುಹಿಸಬಹುದು. ಆದರೆ ನಾನು ಆ ಕೆಲಸ ಮಾಡೋದಿಲ್ಲ. ಎನ್‍ಆರ್‍ಸಿ ವಿರುದ್ಧದ ಹೋರಾಟ ನಿಲ್ಲೋದಿಲ್ಲ ಅಂತ ಯುಟಿ ಖಾದರ್ ಹೇಳಿದರು.

Facebook Comments

comments