LATEST NEWS
ಸ್ಯಾಟಲೈಟ್ ಕರೆ ಸಂಬಂಧ ಎನ್ ಐ ಎ ಅಧಿಕಾರಿಗಳಿಂದ ಮೌಲ್ವಿಯೊಬ್ಬರ ಬಂಧನ

ಸ್ಯಾಟಲೈಟ್ ಕರೆ ಸಂಬಂಧ ಎನ್ ಐ ಎ ಅಧಿಕಾರಿಗಳಿಂದ ಮೌಲ್ವಿಯೊಬ್ಬರ ಬಂಧನ
ಮಂಗಳೂರು ಅಗಸ್ಟ್ 19: ಪಾಕಿಸ್ತಾನದಿಂದ ಬೆಳ್ತಂಗಡಿಯ ಗೋವಿಂದೂರಿಗೆ ಸ್ಯಾಟಲೈಟ್ ಕರೆ ಬಂದ ಹಿನ್ನಲೆಯಲ್ಲಿ ತನಿಖೆ ನಡೆಸುತ್ತಿರುವ NIA ಅಧಿಕಾರಿಗಳು ಮೌಲ್ವಿಯೊಬ್ಬರನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಗೋವಿಂದೂರಿನಲ್ಲಿ ಮೌಲ್ವಿಯ ಬಂಧನವಾಗಿದ್ದು, ಬಂಧಿತರನ್ನು ಗೋವಿಂದೂರು ಗ್ರಾಮದವರು ಎಂದು ಗುರುತಿಸಲಾಗಿದೆ. ಬಂಧಿತ ಶಂಕಿತ ವ್ಯಕ್ತಿ ಕೇರಳದ ಮಸೀದಿಯೊಂದರಲ್ಲಿ ಮೌಲ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. NIA ಅಧಿಕಾರಿಗಳು ಬಂಧಿತ ವ್ಯಕ್ತಿಯ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್(ರಾ) ಅಧಿಕಾರಿಗಳು ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಸ್ಯಾಟಲೈಟ್ ಕರೆಗಳು ವಿನಿಮಯವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಜಿಲ್ಲೆಗೆ ಎನ್ ಐಎ 3 ಜನರ ತನಿಖಾ ತಂಡವೊಂದು ಆಗಮಿಸಿದ್ದು, ಬೆಳ್ತಂಗಡಿ ತಾಲೂಕಿನ ಗೋವಿಂದೂರು ಪರಿಸರದಲ್ಲಿ ನಿರಂತರವಾಗಿ ವಿದೇಶಗಳಿಗೆ ಕರೆ ಹೋಗುತ್ತಿರುವ ಮಾಹಿತಿಯನ್ನು ಕೇಂದ್ರೀಯ ಗುಪ್ತಚರ ಇಲಾಖೆ ಕಲೆ ಹಾಕಿದೆ. ಈ ಮಾಹಿತಿಯ ಮೇರೆಗೆ ರಾಷ್ಟ್ರೀಯ ತನಿಖಾ ದಳ ಬೆಳ್ತಂಗಡಿಯಲ್ಲಿ ತನ್ನ ತನಿಖೆಯನ್ನು ಮುಂದುವರಿಸಿದೆ.