ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ ಮದುವೆ ಶೃಂಗಾರದಲ್ಲಿ ನವ ವಧುಗಳಿಂದ ಮತದಾನ

ಮಂಗಳೂರು ಎಪ್ರಿಲ್ 18: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮತದಾನ ಬಿರುಸಿನಿಂದ ಸಾಗುತ್ತಿದೆ. ಇತ್ತಿಚೆಗಿನ ಮಾಹಿತಿ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುಮಾರು ಶೇಕಡ 14.95 ರಷ್ಟು ಮತದಾನ ದಾಖಲಾಗಿದೆ.

ಎಪ್ರಿಲ್ ತಿಂಗಳು ಮದುವೆ ಸಿಸನ್ ಆದ ಹಿನ್ನಲೆಯಲ್ಲಿ ಇಂದು ಕೂಡ ಜಿಲ್ಲೆಯಲ್ಲಿ ಹಲವಾರು ಕಡೆಗಳಲ್ಲಿ ಮದುವೆ ಸಮಾರಂಭ ಇದೆ. ಈ ಹಿನ್ನಲೆಯಲ್ಲಿ ಬೆಳಿಗ್ಗೆಯೇ ಮದುಮಕ್ಕಳು ಮತದಾನಗಟ್ಟೆಗಳಿಗೆ ತೆರಳಿ ತಮ್ಮ ಮತ ಚಲಾಯಿಸುತ್ತಿರುವುದು ಕಂಡು ಬಂದಿದೆ.

ವಿಟ್ಲದ ಕುಡ್ಪಲ್ತಡ್ಕದಲ್ಲಿ ನವವಧು ಮದುವೆಗೆ ತೆರಳುವ ಮುಂಚೆ ಮತದಾನ ಮಾಡಿದ್ದಾರೆ. ಆನೆಯಾಲಗುತ್ತು ನಿವಾಸಿಯಾಗಿರುವ ನೂತನ ವಧು ಶ್ರುತಿ ಶೆಟ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕುಡ್ಪಲ್ತಡ್ಕ ಮತದಾನ ಕೇಂದ್ರ ದಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.

ಅಲ್ಲದೆ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಬೂತ್ ನಲ್ಲಿ ಕೂಡ ಮೂವರು ನವ ವಧುಗಳು ಮತ ಚಲಾಯಿಸಿದ್ದಾರೆ. ಅಕ್ಷತಾ, ಅಶ್ವಿನಿ ಮತ್ತು ಹೇಮಲತಾ ಮದುವೆ ಶೃಂಗಾದರಲ್ಲೇ ಬಂದು ಮತ ಚಲಾಯಿಸಿ ತಮ್ಮ ಹಕ್ಕನ್ನು ನೆರವೇರಿಸಿದ್ದಾರೆ.

VIDEO