ಉಪ್ಪಿನಂಗಡಿಯಲ್ಲಿ ಕಾಂಗ್ರೇಸ್ ಹಾಗೂ ಎಸ್ ಡಿಪಿಐ ಕಾರ್ಯಕರ್ತರ ನಡುವೆ ಘರ್ಷಣೆ

ಉಪ್ಪಿನಂಗಡಿ ಎಪ್ರಿಲ್ 18: ಕಾಂಗ್ರೆಸ್ ಹಾಗೂ SDPI ಕಾರ್ಯಕರ್ತರ ನಡುವೆ ಮತಗಟ್ಟೆಯೊಂದರಲ್ಲಿ ಘರ್ಷಣೆ ನಡೆದಿವ ಬಗ್ಗೆ ವರದಿಯಾಗಿದೆ. ಉಪ್ಪಿನಂಗಡಿ ಗ್ರಾಮದ ಮತಗಟ್ಟೆ ಸಂಖ್ಯೆ 41 ರ ಮಠ ಹರ್ತಡ್ಕ ಮತಗಟ್ಟೆಲ್ಲಿ ಈ ಘಟನೆ ನಡೆದಿದೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ದೌಡಾಯಿಸಿದ್ದು, ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.