LATEST NEWS
ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಚಾರಿ ನಿಯಮ ಪಾಲನೆ : 4553 ಕೇಸು 14 ಲಕ್ಷ ರೂಪಾಯಿ ದಂಡ ವಸೂಲಿ

ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಚಾರಿ ನಿಯಮ ಪಾಲನೆ : 4553 ಕೇಸು 14 ಲಕ್ಷ ರೂಪಾಯಿ ದಂಡ ವಸೂಲಿ
ಮಂಗಳೂರು ಸೆಪ್ಟೆಂಬರ್ 10: ಕೇಂದ್ರ ಸರಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆಯ ಪರಿಷ್ಕೃತ ದಂಡ ನಿಯಮ ಜಾರಿಗೆ ಬಂದ ನಂತರ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದ್ದು, ಎರಡು ಜಿಲ್ಲೆಗಳಲ್ಲಿ ಒಟ್ಟು 4553 ಕೇಸು ಹಾಗೂ 14 ಲಕ್ಷ ದಂಡ ವಸೂಲಿ ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 5 ರಿಂದ ಹೊಸ ಸಂಚಾರಿ ಕಾನೂನು ಜಾರಿಗೆ ತರಲಾಗಿದ್ದು, ಇಲ್ಲಿಯವರೆಗೆ ಉಡುಪಿಯಲ್ಲಿ 752 ಸಂಚಾರ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 3.69 ಲಕ್ಷ ರೂಪಾಯಿ ದಂಡ ಹಾಕಲಾಗಿದೆ.

752 ಪ್ರಕರಣಗಳಲ್ಲಿ 167 ಪ್ರಕರಣಗಳಿಗೆ ನೋಟಿಸ್ ನೀಡಲಾಗಿದೆ. ಉಳಿದ 585 ಪ್ರಕರಣಗಳಲ್ಲಿ 3,69,200 ರೂಪಾಯಿ ಸ್ಥಳ ದಂಡವನ್ನು ವಿಧಿಸಲಾಗಿದೆ.
ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 7 ರಿಂದ 9ರ ವರೆಗೆ ಒಟ್ಟು 1635 ಪ್ರಕರಣಗಳಿಗೆ ಸಂಬಂಧಿಸಿದಂತೆ 3,92,800 ರೂಪಾಯಿ ದಂಡ ಸಂಗ್ರಹಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಹೊಸ ನಿಯಮಾವಳಿಯಂತೆ ದಂಡ ವಿಧಿಸಲಾಗುತ್ತಿದ್ದು ಇಲ್ಲಿಯವರೆಗೆ ಸುಮಾರು 2166 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಒಟ್ಟು 6,33,400 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.
ಉಭಯ ಜಿಲ್ಲೆಗಳಲ್ಲಿ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಪೊಲೀಸರು ವಾಹನ ತಪಾಸಣೆ ಸಂದರ್ಭ ಮೊಬೈಲ್ ನಲ್ಲಿ ಸರಕಾರದ ಅಧಿಕೃತ ಡಿಜಿಲಾಕರ್, ಎಂ ಪರಿವಾಹನ್ ಆ್ಯಪ್ ಗಳಲ್ಲಿ ಇರುವ ದಾಖಲೆ ಪ್ರದರ್ಶಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.