ಬಿಯರ್ ಬಾಟಲ್ ಎದುರು ಗೋಕುಲ ಪಾಲಕನ ಅವಹೇಳನ ಟಿಕ್ ಟಾಕ್ ವೀರರಿಂದ ಕ್ಷಮಾಪನೆ

ಮಂಗಳೂರು ಸೆಪ್ಟೆಂಬರ್ 9: ಗೋಕುಲಾಷ್ಟಮಿಯಂದು ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೃಷ್ಣ ವೇಷಧಾರಿಯೊಬ್ಬಳ ಪೋಟೋ ಹಾಗೂ ಅವಳ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಅಲ್ಲದೆ ಯಾರ ಡಿಪಿಯಲ್ಲಿ ನೋಡಿದ್ರೂ ಅವಳದ್ದೇ ವಿಡಿಯೋ, ಅವಳದ್ದೇ ಫೋಟೋ.

ಅದರ ನಂತರ ನಡೆದಿದ್ದೆ ಬೇರೆ ಅದೇ ಹಾಡನ್ನು ಅವಳದ್ದೇ ಅಭಿನಯವನ್ನು ಟಿಕ್ ಟಾಕ್ ಮಾಡುತ್ತಾ ಬೇರೆ ಬೇರೆ ರೀತಿಯಲ್ಲಿ ಡ್ಯಾನ್ಸ್ ಮಾಡಿ ಅನುಕರಣೆ ಮಾಡಿದ್ದರು. ಆದರೆ ಚಿಕ್ಕಮಗಳೂರಿನ ಈ ಹುಡುಗರಿಗೇ ಏನಾಗಿತ್ತೋ ಗೊತ್ತಿಲ್ಲ ದೇವರ ಹಾಡು ಅಂತು ಗೊತ್ತಿದ್ದರೂ ಅಸಭ್ಯ ರೀತಿಯಲ್ಲಿ ಅನುಕರಣೆ ಮಾಡಲು ಹೋಗಿ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ ಈಗ ಕ್ಷಮೆ ಕೇಳಿದ್ದಾರೆ.

ಚೌತಿ ಸಂದರ್ಭ ಈ ಹುಡುಗರು ಒಂದು ಬಿಯರ್ ಬಾಟಲ್ ಹಿಡ್ಕೊಂಡು ಟಿಕ್ ಟಾಕ್ ಮಾಡಿದ್ರು. ಮೊಸರಿನ ಕುಡಿಕೆಯ ಬದಲಿಗೆ ಬಿಯರ್ ಬಾಟಲ್ ಒಡೆದಂತೆ ಅಭಿನಯಿಸಿದ ಟಿಕ್ ಟಾಕ್ ಕೂಡಾ ವೈರಲ್ ಆಗಿತ್ತು.

ಇದರಿಂದ ಕೋಪಗೊಂಡ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬಜರಂಗದಳದ ಯುವಕರು ಟಿಕ್ ಟಾಕ್ ವೀರರ ವಿಳಾಸ ಪತ್ತೆ ಮಾಡಿದ್ದಾರೆ. ಮೂಲತ: ದಕ್ಷಿಣ ಕ್ನನಡ ಜಿಲ್ಲೆಯ ಮೂಡುಬಿದಿರೆಯ ಹುಡುಗನೊಬ್ಬ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿದ್ದಲ್ಲದೇ ಠಾಣೆಗೆ ಕರೆಸಿ ದೂರು ನೀಡಲು ಮುಂದಾಗಿದ್ದರು.

ಯಾವಾಗ ಹಿಂದೂ ಸಂಘಟನೆಗಳು ಕೆಂಗಣ್ಣಿಗೆ ಗುರಿಯಾದರೋ ಹೆದರಿಕೊಂಡ ಕಸಿವಿಸಿಕೊಂಡ ಈ ತರುಣರು ಕ್ಷಮೆ ಕೆಳುವ ವಿಡಿಯೋ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕೂಡಾ ವೈರಲ್ ಆಗಿದೆ.

VIDEO

Facebook Comments

comments