Connect with us

LATEST NEWS

ದೇವಸ್ಥಾನದ ಎದುರೇ ಸುಟ್ಟು ಕರಕಲಾಯ್ತು ಹೊಸ ರಾಯಲ್‌ ಎನ್‌ ಫೀಲ್ಡ್‌ ಬೈಕ್‌

ಅನಂತಪುರ, ಎಪ್ರಿಲ್ 04: ಕೆಲವು ದಿನಗಳ ಹಿಂದೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಳಲ್ಲಿ ಬೆಂಕಿ ಕಾಣಿಸಿಕೊಂಡಿರೋ ಸುದ್ದಿ ಪ್ರಚಲಿತದಲ್ಲಿ ಇತ್ತು. ಇದೀಗ ರಾಯಲ್‌ ಎನ್‌ ಫೀಲ್ಡ್‌ ಬೈಕ್‌ ಒಂದು ಸುಟ್ಟು ಕರಕಲಾಗಿರೋದನ್ನು ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ.

ಮಾಲೀಕ ಹೊಸ ಬೈಕ್‌ ಗೆ ಪೂಜೆ ಮಾಡಿಸುವ ಸಲುವಾಗಿ ದೇವಸ್ಥಾನಕ್ಕೆ ತಂದಿದ್ದರು.ಕೆಲವೇ ಕ್ಷಣಗಳಲ್ಲಿ ಬೈಕ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಬೈಕ್‌ ಬಾಂಬ್‌ ನಂತೆ ಭಯಂಕರ ಸದ್ದಿನೊಂದಿಗೆ ಸ್ಫೋಟಗೊಂಡಿದೆ.

ಬೈಕ್ ಮೈಸೂರಿನ ವ್ಯಕ್ತಿಗೆ ಸೇರಿದ್ದು ಅಂತಾ ಹೇಳಲಾಗ್ತಿದೆ. ರವಿಚಂದ್ರನ್‌ ಎಂಬಾತ ಹೊಸ ಎನ್‌ ಫೀಲ್ಡ್‌ ಬೈಕ್‌ ಗೆ ಪೂಜೆ ಮಾಡಿಸಲು ಅನಂತಪುರದ ಆಂಜನೇಯ ಸ್ವಾಮಿ ದೇವಾಲಯಕ್ಕೆ ತಂದಿದ್ದರು. ರಸ್ತೆ ಬದಿಯಲ್ಲಿ ಎನ್‌ ಫೀಲ್ಡ್‌ ನಿಲ್ಲಿಸಿ ಪೂಜೆಯ ತಯಾರಿ ಮಾಡಿಕೊಳ್ತಿದ್ದರು.

ಮೊದಲು ಬೈಕ್‌ ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಅದಾದ್ಮೇಲೆ ಬೆಂಕಿ ಹೊತ್ತಿಕೊಂಡು ಕೆಲ ಹೊತ್ತಿನಲ್ಲೇ ಬೈಕ್‌ ಸ್ಫೋಟಗೊಂಡಿದೆ. ಬೆಂಕಿ ಅಕ್ಕಪಕ್ಕದಲ್ಲಿ ನಿಂತಿದ್ದ ವಾಹನಗಳಿಗೂ ಆವರಿಸಿಕೊಂಡಿದೆ. ಈ ದೃಶ್ಯ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ.

Advertisement
Click to comment

You must be logged in to post a comment Login

Leave a Reply