Connect with us

    LATEST NEWS

    ಕರ್ನಾಟಕದಲ್ಲಿ 110ರ ಗಡಿ ದಾಟಿದ ಪೆಟ್ರೋಲ್ ಬೆಲೆ…..!!

    ಬೆಂಗಳೂರು ಎಪ್ರಿಲ್ 05: ದೇಶದಲ್ಲಿ 15 ದಿನಗಳಲ್ಲಿ 13ನೇ ಬಾರಿ ತೈಲ ಬೆಲೆ ಏರಿಕೆಯಾಗಿದೆ. ಇಂದು ಲೀಟರ್ ಪೆಟ್ರೋಲ್ ಬೆಲೆ 82 ಪೈಸೆ ಏರಿಕೆಯಾದರೆ ಡೀಸೆಲ್ ಬೆಲೆ 77 ಪೈಸೆ ಏರಿಕೆಯಾಗಿದೆ.


    ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರಿಗೆ 84 ಪೈಸೆಯಷ್ಟು ಹೆಚ್ಚಾಗಿದ್ದು ₹110.25ಕ್ಕೆ ಏರಿಕೆ ಆಗಿದೆ. ಡೀಸೆಲ್‌ ದರ ಲೀಟರಿಗೆ 78 ಪೈಸೆ ಹೆಚ್ಚಾಗಿದ್ದು ₹94.01ಕ್ಕೆ ತಲುಪಿದೆ. ಮಾರ್ಚ್‌ 22ರಿಂದ ಏಪ್ರಿಲ್‌ 4ರವರೆಗೆ ಬೆಂಗಳೂರಿನಲ್ಲಿ ಪೆಟ್ರೋಲ್‌ ದರವು ಲೀಟರಿಗೆ ₹9.59ರಷ್ಟು ಮತ್ತು ಡೀಸೆಲ್‌ ದರ ₹8.98ರಷ್ಟು ಹೆಚ್ಚಳ ಆಗಿದೆ. ಆಂಧ್ರ ಪ್ರದೇಶದ ಚಿತ್ತೂರ್‌ನಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರ ದೇಶದಲ್ಲೇ ದುಬಾರಿ (₹105.52) ಆಗಿದೆ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹120.65ಕ್ಕೆ ಮುಟ್ಟಿದೆ.

    Share Information
    Advertisement
    Click to comment

    You must be logged in to post a comment Login

    Leave a Reply