LATEST NEWS
ಭಾರತೀಯ ಸೇನೆಯ ಜೊತೆಗೆ ಚೀನಾಕ್ಕೆ ತಲೆನೋವಾದ ಹಸ್ತ ಮೈಥುನ…..
ಭಾರತೀಯ ಸೇನೆಯ ಜೊತೆಗೆ ಚೀನಾಕ್ಕೆ ತಲೆನೋವಾದ ಹಸ್ತ ಮೈಥುನ…..
ಬೀಜಿಂಗ್, ಸೆಪ್ಟಂಬರ್ 1: ಚೀನಾ ಮತ್ತು ಭಾರತದ ನಡುವೆ ಗಡಿ ವಿವಾದ ತಾರಕಕ್ಕೇರುತ್ತಿದೆ. ಆಗಸ್ಟ್ 29 ಮತ್ತು 20 ರಂದು ಭಾರತದ ಗಡಿಯೊಳಗೆ ಮತ್ತೊಮ್ಮೆ ನುಗ್ಗಲು ಪ್ರಯತ್ನಿಸಿದ ಚೀನಾ ಸೈನಿಕರನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ.
ಭಾರತ-ಚೀನಾ ಗಡಿ ಭಾಗದ ಪೋಂಗಾಂಗ್ ನದಿಯ ದಕ್ಷಿಣ ಭಾಗಕ್ಕೆ ನುಗ್ಗಲು ಯತ್ನಿಸಿದ ಚೀನೀ ಯೋಧರನ್ನು ತಡೆದು ಹಿಂದೆ ಕಳಿಸುವಲ್ಲಿ ಸೇನೆ ಸಫಲವಾಗಿದೆ.
ಅಲ್ಲದೆ ಪೋಂಗಾಂಗ್ ಹಾಗೂ ಆಸುಪಾಸಿನ ಭಾಗದಲ್ಲಿ ಹೆಚ್ಚಿನ ಯೋಧರನ್ನು ನೇಮಿಸುವ ಮೂಲಕ ಪೋಂಗಾಂಗ್ ಪ್ರದೇಶವನ್ನು ತನ್ನ ಸುಪರ್ದಿಗೆ ಸೇರಿಸಿದೆ.
ಪೋಂಗಾಂಗ್ ಭಾಗಕ್ಕೆ ಚೀನಾ ಸೈನಿಕರು ನುಗ್ಗಲು ಯತ್ನಿಸುವ ಮಾಹಿತಿ ಪಡೆದ ಭಾರತೀಯ ಸೇನೆ ಅದಕ್ಕಿಂತಲೂ ಎತ್ತರದ ಪ್ರದೇಶಕ್ಕೆ ಚೀನಾ ಸೈನಿಕರು ತಲುಪುವ ಮೊದಲೇ ತಲುಪಿ ಚೀನ ಸೈನಿಕರಿಗೆ ಮರಳಿ ಹೋಗುವಂತೆ ಸೂಚನೆ ನೀಡಿದ್ದಾರೆ.
ಪರಿಸ್ಥಿತಿಯ ಪರಿಣಾಮವನ್ನು ಅರಿತ ಚೀನ ಸೈನಿಕರು ಯಾವುದೇ ಪ್ರತಿಭಟನೆಯಿಲ್ಲದೆ ವಾಪಾಸು ಚೀನಾ ಭಾಗಕ್ಕೆ ತೆರಳಿದ್ದಾರೆ.
ಈ ನಡುವೆ ಚೀನಾ ಸರಕಾರ ಭಾರತೀಯ ಸೇನೆ ಚೀನಾ ಗಡಿಯೊಳಗೆ ನುಗ್ಗಿ ಗಡಿ ಒಪ್ಪಂದವನ್ನು ಮುರಿಯುತ್ತಿದೆ ಎಂದು ಆರೋಪಿಸಿದೆ.
ಒಂದೆಡೆ ಚೀನಾ ಮತ್ತೆ ಭಾರತ ನಡುವೆ ಗಡಿ ವಿಚಾರದಲ್ಲಿ ಘರ್ಷಣೆಗಳು ಹೆಚ್ಚಾಗುತ್ತಿದ್ದರೆ, ಚೀನಾ ಸರಕಾರಕ್ಕೆ ಮತ್ತೊಂದು ತಲೆನೋವು ಕಾಡಲಾರಂಭಿಸಿದೆ.
ಮಾಹಿತಿಯ ಪ್ರಕಾರ ಚೀನಾ ಸೈನಿಕರಲ್ಲಿ ಹೆಚ್ಚುತ್ತಿರುವ ಹಸ್ತ ಮೈಥುನ ಚೀನಾ ಸರಕಾರವನ್ನು ಹೊಸ ಸಮಸ್ಯೆಯಲ್ಲಿ ಸಿಲುಕಿಸಿದೆ.
ಸೈನಿಕರ ಈ ರೀತಿಯ ವರ್ತನೆಯಿಂದಾಗಿ ಸೈನ್ಯದಲ್ಲಿ ಶಿಸ್ತಿನ ಕೊರತೆ ಎದುರಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ.
ಒಂದೆಡೆ ಸುಭದ್ರ ಭಾರತೀಯ ಸೇನೆ ಹಾಗೂ ಇನ್ನೊಂದೆಡೆ ಹಸ್ತ ಮೈಧುನದಲ್ಲಿ ನಿರತ ಸೈನಿಕರು ಚೀನಾ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.
ಚೀನಾ ಸೇನೆಯ ಈ ವರ್ತನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.