Connect with us

    LATEST NEWS

    ನೇಪಾಳದ ಹೆದ್ದಾರಿಯಲ್ಲಿ ಭಾರೀ ಕುಸಿತ ನದಿಗೆ ಬಿದ್ದ ಎರಡು ಬಸ್ – 65 ಮಂದಿ ಮಿಸ್ಸಿಂಗ್

    ಕಠ್ಮಂಡು ಜುಲೈ 12 : ನೇಪಾಳದಲ್ಲಿ ಗುಡ್ಡಕುಸಿದ ಪರಿಣಾಮ ಎರಡು ಬಸ್ ಗಳು ನದಿಗೆ ಬಿದ್ದು 65ಕ್ಕೂ ಅಧಿಕ ಮಂದಿ ನಾಪತ್ತೆಯಾಗಿರುವ ಘಟನೆ ಚಿತ್ವಾನ್ ಜಿಲ್ಲೆಯ ನಾರಾಯಣಘಾಟ್-ಮುಗ್ಲಿಂಗ್ ರಸ್ತೆಯ ಸಿಮಲ್ಟಾಲ್ ಪ್ರದೇಶದಲ್ಲಿ ನಡೆದಿದೆ.


    ಬೆಳಗಿನ ಜಾವ 3:30 ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಈ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಎರಡು ಬಸ್ ಗಳು ತ್ರಿಶೂಲಿ ನದಿಯಲ್ಲಿ ಇಬ್ಬರು ಚಾಲಕರು ಸೇರಿ 65 ಮಂದಿ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. ಬಸ್‌ಗಳು ಜಖಂಗೊಡಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

    ನಾವು ಘಟನಾ ಸ್ಥಳದಲ್ಲಿದ್ದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಎಡೆಬಿಡದೆ ಮಳೆ ಸುರಿಯುತ್ತಿದ್ದು, ಇದು ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡುತ್ತಿದೆ ಎಂದು ಚಿತ್ವಾನ್‌ನ ಮುಖ್ಯ ಜಿಲ್ಲಾ ಅಧಿಕಾರಿ ಇಂದ್ರದೇವ್ ಯಾದವ್ ತಿಳಿಸಿದ್ದಾರೆ. ಕಠ್ಮಂಡುವಿನಿಂದ ರೌತಹತ್‌ನ ಗೌರ್‌ಗೆ ತೆರಳುತ್ತಿದ್ದ ಕಠ್ಮಂಡುವಿನಿಂದ ಹೊರಟಿದ್ದ ಏಂಜೆಲ್ ಬಸ್ ಮತ್ತು ಗಣಪತಿ ಡಿಲಕ್ಸ್ ಬಸ್ ಭೂಕುಸಿತಕ್ಕೆ ಸಿಲುಕಿದೆ ಎಂದು ತಿಳಿದುಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply